ADVERTISEMENT

ಜಲ ಜೀವನ ಮಿಷನ್: ಹೆಚ್ಚುವರಿ 6 ಕೋಟಿ ಗ್ರಾಮದ ಮನೆಗಳಿಗೆ ನಲ್ಲಿ ನೀರು

ಜಲ ಜೀವನ ಮಿಷನ್ ಅಡಿ 9.24 ಮನೆಗಳಿಗೆ ನಲ್ಲಿ ನೀರು: ಕೇಂದ್ರ

ಪಿಟಿಐ
Published 22 ಮಾರ್ಚ್ 2022, 12:26 IST
Last Updated 22 ಮಾರ್ಚ್ 2022, 12:26 IST
ಪ್ರಹ್ಲಾದ್ ಪಟೇಲ್, ಕೇಂದ್ರ ಸಚಿವ
ಪ್ರಹ್ಲಾದ್ ಪಟೇಲ್, ಕೇಂದ್ರ ಸಚಿವ   

ನವದೆಹಲಿ: ಕೇಂದ್ರ ಸರ್ಕಾರದ 'ಜಲ ಜೀವನ ಮಿಷನ್' ಆರಂಭವಾದ ಬಳಿಕ ಹೆಚ್ಚುವರಿಯಾಗಿ ಗ್ರಾಮೀಣ ಪ್ರದೇಶದ 6 ಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವಾಲಯದ ರಾಜ್ಯ ಸಚಿವ ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ.

ವಿಶ್ವ ಜಲ ದಿನದ ಪ್ರಯುಕ್ತ ಮಂಗಳವಾರ ಮಾತನಾಡಿದ ಅವರು, 'ಭವಿಷ್ಯದ ಜನ ಸಮುದಾಯಕ್ಕೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಸಲುವಾಗಿ ಸರ್ಕಾರಕ್ಕೆ ನೀರಿನ ಸಂರಕ್ಷಣೆ ಆದ್ಯತೆಯಾಗಿದೆ. ನಮ್ಮ ಮಕ್ಕಳಿಗಾಗಿ ನೀರಿನ ಸಂರಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಅಲ್ಲದೆ ಎಲ್ಲರಿಗೂ ನಲ್ಲಿ ನೀರಿನ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ' ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2019ರ ಆಗಸ್ಟ್‌ನಲ್ಲಿ 'ಜಲ ಜೀವನ ಮಿಷನ್' ಯೋಜನೆ ಆರಂಭಿಸಿದ್ದರು. ಈವರೆಗೆ ಈ ಯೋಜನೆಯಡಿ 9.24 ಕೋಟಿಗೂ ಹೆಚ್ಚು ಗ್ರಾಮೀಣ ಮನೆಗಳಿಗೆ ನಲ್ಲಿ ನೀರು ಸೌಕರ್ಯ ಕಲ್ಪಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.