
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಟ್ರಾದಲ್ಲಿ ನಿರ್ಮಾಣಗೊಳ್ಳಲಿರುವ ಆದಿ ಶಂಕರಾಚಾರ್ಯ ದೇಗುಲಕ್ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ಅಂತರರಾಷ್ಟ್ರಿಯ ವಸ್ತುಸಂಗ್ರಹಾಲಯ ಸೇರಿದಂತೆ ಕಟ್ರಾದ ಅಭಿವೃದ್ಧಿಗೆ ಅಗತ್ಯವಾದ ಹಲವು ಯೋಜನೆಗಳನ್ನು ಇದೇ ವೇಳೆ ಘೋಷಣೆ ಮಾಡಿದರು.
‘1967ರಲ್ಲಿ ರೂಪಿಸಲಾಗಿದ್ದ ದೇಗುಲ ನಿರ್ಮಾಣ ಯೋಜನೆಯು ಆರು ದಶಕಗಳ ಬಳಿಕ ಕಾರ್ಯರೂಪಕ್ಕೆ ಬರುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ರಸ್ತೆ ಸಂಪರ್ಕವನ್ನು ಕೂಡ ಸುಧಾರಿಸಲಾಗುವುದು. ಭೂಮಿಕಾ ದೇಗುಲದ ಪುನರ್‌ನಿರ್ಮಾಣ ಮತ್ತು ಸುಧಾರಿತ ವ್ಯವಸ್ಥೆಗಳನ್ನು ಕಲ್ಪಿಸುವ ಪ್ರಸ್ತಾವವೂ ಇದೆ’ ಎಂದು ಸಿನ್ಹಾ ಅವರುಹೇಳಿದರು.
‘ದೇಶದಾದ್ಯಂತ ಇರುವ ಪ್ರಮುಖ ದೇವಿ ದೇಗುಲಗಳಿಗೆ ಸಂಬಂಧಿಸಿದ ವಸ್ತುಗಳ ಸಂಗ್ರಹಾಲಯ ನಿರ್ಮಿಸಲಾಗುವುದು. ಬೆಳಕು ಮತ್ತು ಧ್ವನಿ ತಂತ್ರಜ್ಞಾನದ ಮೂಲಕ ವಿಶೇಷ ಅನುಭವ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು’ ಎಂದರು.
‘ಭೋಲೇನಾಥರ ದರ್ಶನಕ್ಕಾಗಿ ಶಿವ ಖೋರಿಗೆ ತೆರಳುವ ಭಕ್ತರಿಗಾಗಿ ಕಟ್ರಾದಿಂದ ಹೆಲಿಕಾಪ್ಟರ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.