ADVERTISEMENT

ಗೋವಾ ಕಡಲ ಸಮಾವೇಶ ಉದ್ಘಾಟನೆ: 14 ರಾಷ್ಟ್ರಗಳ ನಿಯೋಗಗಳು ಭಾಗಿ

ಪಿಟಿಐ
Published 21 ಫೆಬ್ರುವರಿ 2026, 15:31 IST
Last Updated 21 ಫೆಬ್ರುವರಿ 2026, 15:31 IST
ದಿನೇಶ್‌ ಕೆ. ತ್ರಿಪಾಠಿ 
ದಿನೇಶ್‌ ಕೆ. ತ್ರಿಪಾಠಿ    

ಪಣಜಿ: ಭಾರತೀಯ ನೌಕಾಪಡೆಯ ‘2026ರ ಗೋವಾ ಕಡಲ ಸಮಾವೇಶ’ವನ್ನು ‌ನೌಕಾಪಡೆಯ ಮುಖ್ಯಸ್ಥ, ಅಡ್ಮಿರಲ್‌ ದಿನೇಶ್‌ ಕೆ. ತ್ರಿಪಾಠಿ ಅವರು ಶನಿವಾರ ಉದ್ಘಾಟಿಸಿದರು.

ಈ ಸಮ್ಮೇಳನದಲ್ಲಿ ಬಾಂಗ್ಲಾದೇಶ, ಇಂಡೊನೇಷ್ಯಾ, ಮಲೇಷ್ಯಾ, ಕೀನ್ಯಾ, ಸಿಂಗಪುರ, ಶೀಲಂಕಾ, ಮಡಗಾಸ್ಕರ್‌, ಥಾಯ್ಲೆಂಡ್ ಸೇರಿದಂತೆ ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಿರುವ 14 ರಾಷ್ಟ್ರಗಳ ನಿಯೋಗಗಳು ಭಾಗಿಯಾಗಿದ್ದು, ಮಾದಕ ವಸ್ತು ಸಾಗಣೆ ಮತ್ತು ಅಕ್ರಮ ಮೀನುಗಾರಿಕೆ ಸೇರಿದಂತೆ ಹಲವು ಪ್ರಾದೇಶಿಕ ಸವಾಲುಗಳ ಕುರಿತು ಚರ್ಚಿಸಲಿದ್ದಾರೆ.

ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ  ವೈಸ್‌ ಅಡ್ಮಿರಲ್  ಸಮೀರ್‌ ಸಕ್ಸೇನಾ, ನೌಕಾ ಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್‌ ಅರುಣ್‌ ಪ್ರಕಾಶ್‌ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.