ADVERTISEMENT

ಮೌಂಟ್‌ ಎವರೆಸ್ಟ್‌ನ ಬೇಸ್‌ ಕ್ಯಾಂಪ್‌ ಏರಿದ ಒಂಬತ್ತರ ಬಾಲೆ!

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2023, 15:41 IST
Last Updated 8 ಅಕ್ಟೋಬರ್ 2023, 15:41 IST
ಮೌಂಟ್‌ ಎವರೆಸ್ಟ್‌ನ ಬೇಸ್‌ ಕ್ಯಾಂಪ್‌ ಏರಿದ ಬಾಲಕಿ ಸ್ವರ ಪಾಟೀಲ –ಪ್ರಜಾವಾಣಿ ಚಿತ್ರ
ಮೌಂಟ್‌ ಎವರೆಸ್ಟ್‌ನ ಬೇಸ್‌ ಕ್ಯಾಂಪ್‌ ಏರಿದ ಬಾಲಕಿ ಸ್ವರ ಪಾಟೀಲ –ಪ್ರಜಾವಾಣಿ ಚಿತ್ರ   

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ-ವಿರಾರ್ ನಗರದ ಬಾಲಕಿ ಸ್ವರ ಪಾಟೀಲ, ನೇಪಾಳದ ಮೌಂಟ್‌ ಎವರೆಸ್ಟ್‌ನ ಬೇಸ್‌ ಕ್ಯಾಂಪ್‌ ಟ್ರೆಕಿಂಗ್ ಪೂರ್ಣಗೊಳಿಸಿದ ಶ್ರೇಯಕ್ಕೆ ಪಾತ್ರಳಾಗಿದ್ದಾಳೆ.

ಸಮುದ್ರಮಟ್ಟದಿಂದ 17,500 ಅಡಿ (5,364 ಮೀ.) ಎತ್ತರದಲ್ಲಿರುವ ಈ ಬೇಸ್‌ ಕ್ಯಾಂಪ್‌ನ ಯಶಸ್ವಿಯಾಗಿ ಮೇಲೇರಿದ್ದಾಳೆ. ಈ ಸಾಧನೆ ಮಾಡಿದ ಪಾಲ್ಘರ್ ಜಿಲ್ಲೆಯ ಅತಿಕಿರಿಯ ಬಾಲಕಿ ಎಂಬುದು ಆಕೆಯ ಹೆಗ್ಗಳಿಕೆ.

ಸ್ವರಳ ಹುಟ್ಟೂರು ವಸೈ ಉಮೇಲ್ಮನ್. ಆಕೆಗೆ ಈಗ ಒಂಬತ್ತು ವರ್ಷ. ತನ್ನ ಅಪ್ಪ ದಿಗಂಬರ ಪಾಟೀಲ, ಶೇರ್ಪಾ ಜಂಗ ಹಾಗೂ ಸಹಾಯಕ ಪ್ರೇಮನ್ ಅವರೊಟ್ಟಿಗೆ 12 ದಿನಗಳ ಚಾರಣ ಕೈಗೊಂಡಿದ್ದಳು. 

ADVERTISEMENT

ಹಲವು ಪರ್ವತಾರೋಹಣ ಯಾತ್ರೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿರಿಮೆ ಹೊಂದಿದ್ದಾಳೆ. ಈ ಪೈಕಿ ಮಹಾರಾಷ್ಟ್ರದ ಅತಿದೊಡ್ಡ ಶಿಖರವಾದ ಕಲ್ಸುಬಾಯಿ (1,646 ಮೀ.), ಹಿಮಾಲಯದ ಸರ್ಪಾಸ್ ಶಿಖರವನ್ನೂ (4,220 ಮೀ.) ಏರಿದ್ದಾಳೆ. ಅಲ್ಲದೇ, ಮಹಾರಾಷ್ಟ್ರದ ಹಲವು ಕೋಟೆಗಳನ್ನು ಹತ್ತಿದ್ದಾಳೆ. 

ವಸೈನ ಕಾರ್ಮೆಲೈಟ್ ಕಾನ್ವೆಂಟ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ 4ನೇ ತರಗತಿ ಓದುತ್ತಿರುವ ಆಕೆಯ ಪರ್ವತಾರೋಹಣ ಸಾಹಸಕ್ಕೆ ಪ್ರಾಂಶುಪಾಲರ ಬೆಂಬಲವೂ ಇದೆ. ಈ ಸಣ್ಣ ಪರ್ವತಾರೋಹಿ ತನ್ನ ಹುಟ್ಟೂರಿನಲ್ಲಷ್ಟೇ ಪ್ರಸಿದ್ಧಿ ಪಡೆದಿಲ್ಲ. ಇಡೀ ಮಹಾರಾಷ್ಟ್ರದಲ್ಲಿ ಆಕೆಯ ಖ್ಯಾತಿ ಹಬ್ಬಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.