ADVERTISEMENT

ಎಲ್ಲ ಮುಗಿದುಹೋಗಿದೆ: ಭಾರತಕ್ಕೆ ಬಂದ ಅಫ್ಗನ್‌ ಸಿಖ್‌ ಸಂಸದ ಕಣ್ಣೀರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2021, 10:10 IST
Last Updated 22 ಆಗಸ್ಟ್ 2021, 10:10 IST
ಅಫ್ಗನ್‌ ಸಂಸದ ನರೇಂದರ್‌ ಸಿಂಗ್‌ ಖಾಲ್ಸಾ
ಅಫ್ಗನ್‌ ಸಂಸದ ನರೇಂದರ್‌ ಸಿಂಗ್‌ ಖಾಲ್ಸಾ    

ನವದೆಹಲಿ: ಭಾರತೀಯ ವಾಯುಪಡೆ ವಿಮಾನದಲ್ಲಿ ಕಾಬೂಲ್‌ನಿಂದ ಭಾರತಕ್ಕೆ ಬಂದ ಅಫ್ಗಾನಿಸ್ತಾನದ ಸಿಖ್‌ ಸಂಸದ ನರೇಂದರ್‌ ಸಿಂಗ್‌ ಖಾಲ್ಸಾ ಭಾವುಕರಾದರು.

ಅಫ್ಗಾನಿಸ್ತಾನದಿಂದ 167 ಮಂದಿಯನ್ನು ಹೊತ್ತು ತಂದ ಭಾರತೀಯ ವಾಯುಪಡೆಯ ವಿಮಾನವು ಹಿಂಡೆನ್‌ ವಾಯುನೆಲೆಯಲ್ಲಿ ಇಳಿಯಿತು. ಈ ತಂಡದಲ್ಲಿದ್ದ ನರೇಂದರ್‌ ಸಿಂಗ್‌ ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿದರು. ‘ ಕಳೆದ 20 ವರ್ಷಗಳಲ್ಲಿ ಅಫ್ಗಾನಿಸ್ತಾನದಲ್ಲಿ ಸಾಧಿಸಿದ್ದೆಲ್ಲವೂ ಹಾಳಾಗಿಹೋಗದೆ. ಈಗ ಶೂನ್ಯ ಆವರಿಸಿದೆ,‘ ಎಂದು ಅವರು ಕಣ್ಣೀರು ಹಾಕಿದರು.

ADVERTISEMENT

ಇದೇ ವೇಳೆ ಅವರು ಭಾರತ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಾಯುಪಡೆಗೆ ಕೃತಜ್ಞತೆ ಅರ್ಪಿಸಿದರು.

ಅಫ್ಗಾನಿಸ್ತಾನದಲ್ಲಿ ನಿಯೋಜನೆಗೊಂಡಿದ್ದ ತನ್ನ ಭದ್ರತಾ ಪಡೆಗಳನ್ನು ಅಮೆರಿಕ ಹಿಂದಕ್ಕೆ ಪಡೆಯುತ್ತಿದೆ. ಹೀಗಾಗಿ ದೇಶದಲ್ಲಿ ಮೇಲುಗೈ ಸಾಧಿಸಿರುವ ತಾಲಿಬಾನ್‌ ಸರ್ಕಾರವನ್ನು ಉರುಳಿಸಿ, ತನ್ನ ಆಡಳಿತ ಘೋಷಿಸಿಕೊಂಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.