ADVERTISEMENT

ಬಿಜೆಪಿಯ ಬಿ ಟೀಂ ಎಂದವರಿಗೆ ಬಿಹಾರದಲ್ಲಿ ಎಐಎಂಐಎಂ ಹೊಡೆತ ನೀಡಿದೆ: ಸಂಸದ ಜಲೀಲ್ 

ಪಿಟಿಐ
Published 11 ನವೆಂಬರ್ 2020, 9:57 IST
Last Updated 11 ನವೆಂಬರ್ 2020, 9:57 IST
ಅಸಾದುದ್ದೀನ್ ಒವೈಸಿ ಪತ್ರಿಕಾಗೋಷ್ಠಿ
ಅಸಾದುದ್ದೀನ್ ಒವೈಸಿ ಪತ್ರಿಕಾಗೋಷ್ಠಿ   

ಔರಂಗಬಾದ್ :ಎಐಎಂಐಎಂ ಬಿಜೆಪಿಯ ಬಿ ಟೀಂ ಎಂದು ಆರೋಪಿಸಿದವರಿಗೆ ಬಿಹಾರ ಚುನಾವಣೆ ಫಲಿತಾಂಶ ಹೊಡೆತ ನೀಡಿದೆ ಎಂದು ಎಐಎಂಐಎಂ ಪಕ್ಷದ ಲೋಕಸಭಾ ಸದಸ್ಯ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.

ಬಿಹಾರ ಚುನಾವಣೆಯಲ್ಲಿ ಹೈದರಾಬಾದ್ಸಂಸದ ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಐದು ಸೀಟುಗಳನ್ನು ಗೆದ್ದುಕೊಂಡಿದೆ.

ಎಐಎಂಐಎಂ ಪಕ್ಷವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಇದುಬಿಜೆಪಿ ಬಿ ಟೀಂ ಎಂದು ಹೇಳಿತ್ತು.

ADVERTISEMENT

ಫಲಿತಾಂಶ ಘೋಷಣೆಯಾದ ನಂತರ ಜಲೀಲ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಅಜಾದ್ ಚೌಕ್‌ನಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ.

ಬಿಹಾರದ ಸೀಮಾಂಚಲ್ ಪ್ರದೇಶದ ಜನರು ಎಐಎಂಐಎಂ ಮತ್ತು ಅಸಾದುದ್ದೀನ್ ಒವೈಸಿ ಮೇಲೆ ನಂಬಿಕೆ ಇರಿಸಿದ್ದಕ್ಕೆ ಧನ್ಯವಾದಗಳು. ನಮ್ಮನ್ನು ಟೀಕಿಸಿದವರ ಮುಖಕ್ಕೆ ಹೊಡೆದಂತಿದೆ ಈ ಚುನಾವಣಾ ಫಲಿತಾಂಶ ಎಂದು ಜಲೀಲ್ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಬಿಜೆಪಿಯ ಬಿ ಟೀಂ ಎಂದು ಅವರು ನಮ್ಮ ಮೇಲೆ ಆರೋಪ ಹೊರಿಸಿದರು. ಆದರೆ ಬಿಹಾರದ ಜನರು ಶ್ರದ್ಧೆ ಮತ್ತು ನಂಬಿಕೆಯನ್ನು ತೋರಿಸಿದ್ದಾರೆ. ಇದು ಆರಂಭ ಮಾತ್ರ ಎಂದಿದ್ದಾರೆ ಜಲೀಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.