ADVERTISEMENT

Ahmedabad Plane Crash | ವಿಮಾನ ಪತನಗೊಂಡಿದ್ದು ವೈದ್ಯರ ವಸತಿ ಸಮುಚ್ಚಯದ ಮೇಲೆ!

ಪಿಟಿಐ
Published 12 ಜೂನ್ 2025, 13:20 IST
Last Updated 12 ಜೂನ್ 2025, 13:20 IST
<div class="paragraphs"><p>ವಿಮಾನ ಪತನಗೊಂಡಿದ್ದು ವೈದ್ಯರ ವಸತಿ ಸಮುಚ್ಚಯದ ಮೇಲೆ</p></div>

ವಿಮಾನ ಪತನಗೊಂಡಿದ್ದು ವೈದ್ಯರ ವಸತಿ ಸಮುಚ್ಚಯದ ಮೇಲೆ

   

ಪಿಟಿಐ ಚಿತ್ರ

ಅಹಮದಾಬಾದ್‌: ಅಹಮದಾಬಾದ್‌ನ ಸರ್ಧಾರ್‌ ವಲಭಭಾಯಿ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಪತನಗೊಂಡಿದ್ದು  ನಗರದ ಬಿಜೆ ವೈದ್ಯಕೀಯ ಕಾಲೇಜಿನ ವೈದ್ಯರ ವಸತಿ ಸಮುಚ್ಚಯದ ಮೇಲೆ.

ADVERTISEMENT

ವಿಮಾನ ಬಿದ್ದ ಪರಿಣಾಮ ವಸತಿ ಸಮುಚ್ಚಯದ ಕಟ್ಟಡಕ್ಕೂ ಅಪಾರ ಹಾನಿಯಾಗಿದೆ. ಸಮುಚ್ಚಯದಲ್ಲಿದ್ದ ಐವರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

ಈ ಕುರಿತು ಪಿಟಿಐ ಜತೆ ಮಾತನಾಡಿರುವ ಪ್ರತ್ಯಕ್ಷದರ್ಶಿ ಹರೇಶ್ ಶಾ, ‘ವಿಮಾನ ತುಂಬಾ ಕೆಳಕ್ಕೆ ಹಾರುತ್ತಿತ್ತು, ನೋಡನೋಡುತ್ತಿದ್ದಂತೇ ಕಟ್ಟಡದ ಮೇಲೆ ಬಿದ್ದಿದೆ. ಕಟ್ಟಡದಲ್ಲಿ ಐದು ಮಹಡಿಗಳನ್ನು ವಸತಿ ಬಳಸಲಾಗುತ್ತಿದೆ. ವಿಮಾನ ಬಿದ್ದಾಗ ಕಟ್ಟಡಕ್ಕೂ ಬೆಂಕಿ ಹೊತ್ತಿಕೊಂಡಿದೆ’ ಎಂದಿದ್ದಾರೆ.

ಮತ್ತೊಬ್ಬ ಪ್ರತ್ಯಕ್ಷದರ್ಶಿ ಮಾತನಾಡಿ, ‘ಕಟ್ಟಡದ ಕೆಳಗಿದ್ದ ಕಾರು ಸೇರಿ ಹಲವು ವಾಹನಗಳಿಗೂ ಬೆಂಕಿ ಬಿದ್ದಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ’ ಎಂದು ಹೇಳಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ನತ್ತ ಪ್ರಯಾಣ ಆರಂಭಿಸಿದ್ದ ಏರ್‌ ಇಂಡಿಯಾ ವಿಮಾನ AI-171 ಇಂದು (ಗುರುವಾರ) ಮಧ್ಯಾಹ್ನ 1.40 ಸುಮಾರಿಗೆ ಪತನಗೊಂಡಿದೆ.

ವಿಮಾನದಲ್ಲಿ 10 ಸಿಬ್ಬಂದಿ ಸೇರಿದಂತೆ ಒಟ್ಟು 242 ಮಂದಿ ಇದ್ದರು. ಯಾರೊಬ್ಬರೂ ಬದುಕುಳಿದಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ, ಆ ಸುದ್ದಿಯನ್ನು ವಿಮಾನಯಾನ ಸಂಸ್ಥೆಯಾಗಲಿ, ನಾಗರಿಕ ವಿಮಾನಯಾನ ಸಚಿವಾಲಯವಾಗಲಿ ಅಥವಾ ಸ್ಥಳೀಯ ಆಡಳಿತ ಖಚಿತಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.