ADVERTISEMENT

ವಿಮಾನ ಇಳಿಯಲು ಅನುಮತಿ ನಿರಾಕರಣೆ: ಆರೋಪ

ಪಿಟಿಐ
Published 2 ಫೆಬ್ರುವರಿ 2023, 11:07 IST
Last Updated 2 ಫೆಬ್ರುವರಿ 2023, 11:07 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಖನೌ/ಮೊರಾದಾಬಾದ್‌: ‘ಅಖಿಲೇಶ್‌ ಯಾದವ್‌ ಅವರ ವಿಮಾನವು ಮೊರಾದಾಬಾದ್‌ನಲ್ಲಿ ಇಳಿಯುವುದಕ್ಕೆ ಉತ್ತರಪ್ರದೇಶ ಸರ್ಕಾರ ಅನುಮತಿಯನ್ನು ನಿರಾಕರಿಸಿದೆ’ ಎಂದು ಸಮಾಜವಾದಿ ಪಕ್ಷ ಗುರುವಾರ ಆರೋಪಿಸಿದೆ.

‘ಮೊದಲೇ ನಿಗದಿಯಾಗಿರುವಂತೆ, ಅಖಿಲೇಶ್‌ ಯಾದವ್‌ ಅವರು ಇದೇ 4ರಂದು ಮೊರಾದಾಬಾದ್‌ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದಕ್ಕೆ ತೆರಳಬೇಕಿದೆ. ಆದರೆ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ವಿಮಾನ ಇಳಿಯಲು ಅನುಮತಿ ನಿರಾಕರಿಸಿದೆ.‌ ಇದು ಅತ್ಯಂತ ಖಂಡನೀಯ. ಶೀಘ್ರದಲ್ಲೇ ಬಿಜೆಪಿ ದುರಹಂಕಾರ ಕೊನೆಗೊಳ್ಳುತ್ತದೆ’ ಎಂದು ಸಮಾಜವಾದಿ ಪಕ್ಷವು ಟ್ವೀಟ್‌ ಮಾಡಿದೆ.

ಆದರೆ ಈ ಆರೋಪ‌ವನ್ನು ನಿರಾಕರಿಸಿರುವ ನಗರ ಮ್ಯಾಜಿಸ್ಟ್ರೇಟ್‌ ಜ್ಯೋತಿ ಸಿಂಗ್‌ ಅವರು, ‘ಏರ್‌ಸ್ಟ್ರಿಪ್‌ನಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಯಾವುದೇ ವಿಮಾನ ಇಳಿಯಲು ಅನುಮತಿಯನ್ನು ನಿರಾಕರಿಸಲಾಗಿದೆ‘ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.