ADVERTISEMENT

Amarnath Yatra: ಪ್ರಯಾಣ ಆರಂಭಿಸಿದ 7 ಸಾವಿರಕ್ಕೂ ಅಧಿಕ ಯಾತ್ರಿಕರು

ಪಿಟಿಐ
Published 15 ಜುಲೈ 2023, 4:42 IST
Last Updated 15 ಜುಲೈ 2023, 4:42 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಜಮ್ಮು: 7 ಸಾವಿರಕ್ಕೂ ಅಧಿಕ ಯಾತ್ರಿಕರನ್ನೊಳಗೊಂಡ ಹೊಸ ತಂಡ ಜಮ್ಮುವಿನ ಅವಳಿ ಮೂಲ ನೆಲೆಗಳಿಂದ ಶನಿವಾರ ಬೆಳಗ್ಗೆ ಅಮರನಾಥ ಯಾತ್ರೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿರುವ 3,880 ಮೀಟರ್‌ ಎತ್ತರದ ಪ್ರದೇಶದಲ್ಲಿರುವ ಅಮರನಾಥ ದೇವಾಲಯಕ್ಕೆ ಜುಲೈ 1ರಂದು ಯಾತ್ರೆ ಪ್ರಾರಂಭವಾಗಿದೆ. 62 ದಿನಗಳ ಈ ಯಾತ್ರೆ ಆಗಸ್ಟ್‌ 31ರಂದು ಕೊನೆಗೊಳ್ಳಲಿದೆ.

ಒಟ್ಟು 7,392 ಯಾತ್ರಿಕರನ್ನೊಳಗೊಂಡ 13ನೇ ತಂಡ 272 ವಾಹನಗಳಲ್ಲಿ ಬಿಗಿ ಭದ್ರತೆ ನಡುವೆ ಭಗವತಿ ನಗರ್ ಕ್ಯಾಂಪ್‌ನಿಂದ ತೆರಳಿದೆ. ಈ ‍ಪೈಕಿ 4,024 ಯಾತ್ರಿಕರು 146 ವಾಹನಗಳಲ್ಲಿ ಪಹಲ್ಗಾಮ್‌ನಿಂದ ಮತ್ತು 3,368 ಯಾತ್ರಿಕರು 126 ವಾಹನಗಳಲ್ಲಿ ಬಲ್ತಾಲ್‌ನಿಂದ ಬೆಳಗ್ಗೆ 4ರ ಸುಮಾರಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಇದರೊಂದಿಗೆ ಜೂನ್‌ 30ರಿಂದ ಇಲ್ಲಿವರೆಗೆ ಒಟ್ಟು 80,181 ಯಾತ್ರಿಕರು ಜಮ್ಮುವಿನ ಮೂಲ ನೆಲೆಗಳಿಂದ ತೆರಳಿದ್ದಾರೆ.

ದೇಶದಾದ್ಯಂತ ಇರುವ ಭಕ್ತರು ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.