ADVERTISEMENT

ಅಮೆಜಾನ್ ಕಂಪನಿ ಎಂಬುದು 'ಈಸ್ಟ್ ಇಂಡಿಯಾ ಕಂಪನಿ 2.0': RSS ಮುಖವಾಣಿ ಆರ್ಗನೈಸರ್

ಪಿಟಿಐ
Published 15 ನವೆಂಬರ್ 2022, 11:21 IST
Last Updated 15 ನವೆಂಬರ್ 2022, 11:21 IST
ಅಮೆಜಾನ್
ಅಮೆಜಾನ್    

ನವದೆಹಲಿ: ಅಮೆರಿಕ ಮೂಲದ ಇ–ಕಾಮರ್ಸ್ ದೈತ್ಯ 'ಅಮೆಜಾನ್ ಕಂಪನಿ' ಮತಾಂತರ ಪ್ರಕ್ರಿಯೆಯಲ್ಲಿ ತೊಡಗುವವರಿಗೆ ಹಣಕಾಸು ನೆರವು ನೀಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ (ಆರ್‌ಎಸ್‌ಎಸ್‌) ಆರ್ಗನೈಸರ್ ವಾರ ಪತ್ರಿಕೆ ಗಂಭೀರ ಆರೋಪ ಮಾಡಿದೆ.

‘ಕ್ರಿಶ್ಚಿಯನ್ ಧರ್ಮಕ್ಕೆ ಜನರನ್ನು ಮತಾಂತರ ಮಾಡುವುದರಲ್ಲಿ ಮುಂಚೂಣಿಯಲ್ಲಿರುವ ಅಮೆರಿಕನ್ ಬ್ಯಾಪಿಟಿಸ್ಟ್ ಚರ್ಚ್‌ (ಎಬಿಎಂ) ಗೆ ಅಮೆಜಾನ್‌ ಹಣಕಾಸು ನೆರವು ನೀಡುತ್ತಿದೆ. ಎಬಿಎಂ ಈಶಾನ್ಯ ಭಾರತ ಸೇರಿದಂತೆ ಭಾರತದ ಅನೇಕ ಕಡೆ ಮತಾಂತರ ಮಾಡುವ ಮಿಷಿನರಿಗಳೊಂದಿಗೆ ಸಂಪರ್ಕದಲ್ಲಿದೆ’ ಎಂದು ಪತ್ರಿಕೆಯ ಇತ್ತೀಚಿನ ನಿಯತಕಾಲಿಕೆಯಲ್ಲಿ ವರದಿ ಮಾಡಲಾಗಿದೆ.

ಈ ಕುರಿತುಆರ್ಗನೈಸರ್ ಪತ್ರಿಕೆ ಕವರ್ ಸ್ಟೋರಿ ಬರೆದಿದೆ. ಈ ಮೂಲಕ ಅಮೆಜಾನ್ ಕಂಪನಿ ಅಕ್ರಮ ಹಣ ವರ್ಗಾವಣೆಯಲ್ಲೂ ತೊಡಗಿಕೊಂಡಿದೆ ಎಂದು ಕೂಡ ಆರೋಪಿಸಲಾಗಿದೆ.

ADVERTISEMENT

‘ಎಬಿಎಂ ಈಶಾನ್ಯ ಭಾರತದಲ್ಲಿ 25,000 ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿರುವುದು ಬೆಳಕಿಗೆ ಬಂದಿದೆ. ಅಮೆಜಾನ್ ಈಸ್ಟ್ ಇಂಡಿಯಾ ಕಂಪನಿ 2.0’ ಎಂದು ಆರ್ಗನೈಸರ್ ಆರೋಪಿಸಿದೆ.

ಆರ್‌ಎಸ್‌ಎಸ್‌ನ ಹಿಂದಿ ಸಾಪ್ತಾಹಿಕ ಕೂಡ ಕಳೆದ ವರ್ಷ, ಸರ್ಕಾರ ತನ್ನ ಪರ ಧೋರಣೆಗಳನ್ನು ತೆಗೆದುಕೊಳ್ಳಲುಅಮೆಜಾನ್ ಕಂಪನಿ ಅಧಿಕಾರಿಗಳಿಗೆ ಕೆಲ ರಾಜಕಾರಣಿಗಳಿಗೆ ಭಾರಿ ಲಂಚ ನೀಡಿತ್ತು ಎಂದು ಆರೋಪಿಸಿತ್ತು. ಅಮೆಜಾನ್ ಭಾರತದ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಲು ನೋಡುತ್ತಿದೆ ಎಂದು ಆರೋಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.