ADVERTISEMENT

ಅಮೃತಸರ | ಅಂಬೇಡ್ಕರ್‌ ಪ್ರತಿಮೆ ಧ್ವಂಸ; BJP ಸಮಿತಿ ಭೇಟಿ, ಎಎಪಿ ವಿರುದ್ಧ ಟೀಕೆ

ಪಿಟಿಐ
Published 2 ಫೆಬ್ರುವರಿ 2025, 9:20 IST
Last Updated 2 ಫೆಬ್ರುವರಿ 2025, 9:20 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಚಂಡೀಗಢ: ಇತ್ತೀಚೆಗೆ ನಡೆದ ಅಂಬೇಡ್ಕರ್‌ ಪ್ರತಿಮೆ ಧ್ವಂಸ ಪ್ರಕರಣದ ತನಿಖೆಗಾಗಿ ಬಿಜೆಪಿ ರಚಿಸಿದ್ದ ಆರು ಸದಸ್ಯರ ಸಮಿತಿ ಇಂದು (ಭಾನುವಾರ) ಅಮೃತಸರಕ್ಕೆ ಭೇಟಿ ನೀಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಬ್ರಿಜ್ ಲಾಲ್, ‘ಘಟನೆಯ ಬಳಿಕ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಆಗಲಿ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರಾಗಲಿ ಅಮೃತಸರಕ್ಕೆ ಭೇಟಿ ನೀಡಿಲ್ಲ. ಕೇಜ್ರಿವಾಲ್‌ ಸುಳ್ಳುಗಳನ್ನು ಮಾತ್ರ ಮಾತನಾಡುತ್ತಾರೆ. ಅವರು ಸಂವಿಧಾನ ಹಾಗೂ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ದೊಡ್ಡ ವಿರೋಧಿಯಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

ಪ್ರತಿಮೆ ಹಾನಿಗೊಳಿಸಿರುವುದು ಖಂಡನಾರ್ಹ. ಈ ಘಟನೆಯನ್ನು ಎಂದಿಗೂ ಸಹಿಸಲಾಗುವುದಿಲ್ಲ. ಇದರ ಹಿಂದೆ ಪಿತೂರಿ ನಡೆಸಲಾಗಿದೆ ಎಂದು ಲಾಲ್‌ ಹೇಳಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಾಲ್‌, ‘ಘಟನೆ ಸಂಬಂಧ ಎಎಪಿ ಸರ್ಕಾರ ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಸುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ. ಇಲ್ಲಿನ ಸರ್ಕಾರ ಕೂಡ ವಿಫಲವಾಗಿದೆ. ಅಂಬೇಡ್ಕರ್‌ ಅವರಿಗೆ ಮಾಡಿರುವ ಅವಮಾನವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಸಮಿತಿಯು ಶೀಘ್ರದಲ್ಲೇ ತನ್ನ ವರದಿ ಸಲ್ಲಿಸುತ್ತದೆ’ ಎಂದು ಅವರು ತಿಳಿಸಿದ್ದಾರೆ.

ರಾಜ್ಯಸಭಾ ಸದಸ್ಯ ಮತ್ತು ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ ಬ್ರಿಜ್ ಲಾಲ್, ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್ ಸಿಂಗ್ ಆರ್ಯ ಮತ್ತು ಮಾಜಿ ಕೇಂದ್ರ ಸಚಿವ ಸೋಮ್ ಪ್ರಕಾಶ್ ಸೇರಿದಂತೆ ಸಮಿತಿಯ ಸದಸ್ಯರು ಅಮೃತಸರದಲ್ಲಿರುವ ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.

ಜನವರಿ 26 ರಂದು ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಹೋಗುವ ಹೆರಿಟೇಜ್ ರಸ್ತೆಯಲ್ಲಿರುವ ಟೌನ್ ಹಾಲ್‌ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಹಾನಿ ಮಾಡಲು ಯತ್ನಿಸಿದ ಆರೋಪದ ಮೇಲೆ ಮೊಗಾ ಜಿಲ್ಲೆಯ ಧರ್ಮಕೋಟ್ ನಿವಾಸಿ ಆಕಾಶ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.