ADVERTISEMENT

ವಿವಾಹಕ್ಕೂ ಮುನ್ನ ಭಿತ್ತಿಪತ್ರ ಪ್ರದರ್ಶಿಸಿ ರೈತರನ್ನು ಬೆಂಬಲಿಸಿದ ಮದುಮಗ

ಏಜೆನ್ಸೀಸ್
Published 14 ಡಿಸೆಂಬರ್ 2020, 6:35 IST
Last Updated 14 ಡಿಸೆಂಬರ್ 2020, 6:35 IST
ರೈತರನ್ನು ಬೆಂಬಲಿಸಿ ಭಿತ್ತಿಪತ್ರ ಪ್ರದರ್ಶಿಸುತ್ತಿರುವ ಮದುಮಗ
ರೈತರನ್ನು ಬೆಂಬಲಿಸಿ ಭಿತ್ತಿಪತ್ರ ಪ್ರದರ್ಶಿಸುತ್ತಿರುವ ಮದುಮಗ   

ಅಮೃತಸರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರಾಜಧಾನಿ ದೆಹಲಿಯ ಒಳಗೂ ಹೊರಗೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರಿಗೆ ವಿವಿಧೆಡೆಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ಅಮೃತಸರದ ಮದುಮಗನೊಬ್ಬ ಮದುವೆಗೂ ಮುನ್ನ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾನೆ.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿರುವ ಅಮೃತಸರದ ಮದುಮಗ ಕಾರಿನ ಮೇಲೆ ರೈತರನ್ನ ಬೆಂಬಲಿಸುವುದಾಗಿ ಭಿತ್ತಿಪತ್ರ ಅಂಟಿಸಿಕೊಂಡು ನವದೆಹಲಿಗೆ ಮದುವೆಗೆ ತೆರಳಿದ್ದಾನೆ.

ಈ ಮಧ್ಯೆ, ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಿದ ಆತ ಭಿತ್ತಿಪತ್ರ ಹಿಡಿದು ರೈತರಿಗೆ ಬೆಂಬಲ ಸೂಚಿಸಿದ್ದಾನೆ.ಕುಟುಂಬ ವರ್ಗ ಸಹ ಮದುಮಗನ ಜೊತೆ ಭಿತ್ತಿಪತ್ರ ಪ್ರದರ್ಶಿಸುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿತು.

ADVERTISEMENT

ಕೃಷಿ ಕಾಯ್ದೆಗಳನ್ನ ಹಿಂಪಡೆಯಬೇಕೆಂದು ರೈತರು ನಡೆಸುತ್ತಿರುವ ಹೋರಾಟ 19ನೇ ದಿನಕ್ಕೆ ಕಾಲಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.