ADVERTISEMENT

ಅಂಡಮಾನ್: ಸಮುದ್ರದಲ್ಲಿ ಹೆಲಿಕಾಪ್ಟರ್ ಪತನ, ಎಲ್ಲ 7 ಮಂದಿಯ ರಕ್ಷಣೆ

ಪಿಟಿಐ
Published 24 ಫೆಬ್ರುವರಿ 2026, 9:40 IST
Last Updated 24 ಫೆಬ್ರುವರಿ 2026, 9:40 IST
<div class="paragraphs"><p>ಎ.ಐ ಚಿತ್ರ</p></div>

ಎ.ಐ ಚಿತ್ರ

   

ಅಂಡಮಾನ್: ಉತ್ತರ ಹಾಗೂ ಮಧ್ಯ ಅಂಡಮಾನ್ ಜಿಲ್ಲೆಯ ರಂಗತ್‌ನಿಂದ ಹಾರಾಟ ನಡೆಸಿದ್ದ ಹೆಲಿಕಾಪ್ಟರ್‌ವೊಂದು ಸಮುದ್ರದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಪೈಲಟ್ ಸೇರಿದಂತೆ ಎಲ್ಲ ಏಳು ಮಂದಿಯನ್ನು ರಕ್ಷಿಸಲಾಗಿದೆ.

ADVERTISEMENT

ಇಂದು ಬೆಳಿಗ್ಗೆ 9.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಹೆಲಿಕಾಪ್ಟರ್ ನಿಗದಿಯಂತೆ ಮಾಯಾಬಂದರ್‌ನಲ್ಲಿ ಲ್ಯಾಂಡಿಂಗ್ ಆಗಬೇಕಿತ್ತು. ಇದಕ್ಕೂ ಮುನ್ನ ಅವಘಡ ಸಂಭವಿಸಿದೆ.

ಹೆಲಿಕಾಪ್ಟರ್‌ನಲ್ಲಿ ಐವರು ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಿಗ್ಗೆ 9.30ರ ಹೊತ್ತಿಗೆ ಹೆಲಿಕಾಪ್ಟರ್ ಸಮುದ್ರಕ್ಕೆ ಅಪ್ಪಳಿಸಿತು. ಪ್ರಾಥಮಿಕ ತನಿಖೆಯಲ್ಲಿ ತಾಂತ್ರಿಕ ದೋಷ ಇರುವುದು ಗೊತ್ತಾಗಿದೆ. ಪೈಲಟ್ ಸಮುದ್ರದಲ್ಲಿ ಕ್ರ್ಯಾಶ್ ಲ್ಯಾಂಡಿಂಗ್ ಮಾಡಿರಬಹುದು ಎಂದು ನಾಗರಿಕ ವಿಮಾನಯಾನ ಅಧಿಕಾರಿ ತಿಳಿಸಿದ್ದಾರೆ.

ಪೋರ್ಟ್ ಬ್ಲೇರ್‌ನಿಂದ ಪರ್ಯಾಯ ಹೆಲಿಕಾಪ್ಟರ್ ರವಾನಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ರಕ್ಷಣಾ ತಂಡ, ಪೊಲೀಸರು, ಕೋಸ್ಟ್ ಗಾರ್ಡ್ ತ್ವರಿತವಾಗಿ ಕಾರ್ಯಾಚರಣೆಯ ಮೂಲಕ ಏಳು ಮಂದಿಯನ್ನು ರಕ್ಷಿಸಿದೆ ಎಂದು ಉತ್ತರ ಹಾಗೂ ಮಧ್ಯ ಅಂಡಮಾನ್ ಉಪ ಆಯುಕ್ತ ಸುಶಾಂತ್ ಪಾಧ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.