ಬಂಧನ
(ಪ್ರಾತಿನಿಧಿಕ ಚಿತ್ರ)
ಅಮರಾವತಿ: ಭಾರತಿ ಸಿಮೆಂಟ್‌ನ ಉನ್ನತ ಅಧಿಕಾರಿ ಬಾಲಾಜಿ ಗೋವಿಂದಪ್ಪ ಎಂಬುವವರನ್ನು ₹3,200 ಕೋಟಿಯ ಅಬಕಾರಿ ಹಗರಣದ ಆರೋಪದಲ್ಲಿ ಆಂಧ್ರಪ್ರದೇಶ ಎಸ್‌ಐಟಿ ಅಧಿಕಾರಿಗಳು ಮೈಸೂರಿನಲ್ಲಿ ಮಂಗಳವಾರ ಬಂಧಿಸಿದ್ದಾರೆ.
ವೈಎಸ್‌ಆರ್‌ಸಿಪಿ ಪಕ್ಷವು ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ನಡೆದಿದೆ ಎನ್ನಲಾದ ಈ ಹಗರಣದಲ್ಲಿ ಬಾಲಾಜಿ ಅವರೂ ಪ್ರಮುಖ ಆರೋಪಿಯಾಗಿದ್ದಾರೆ.
ಬಾಲಾಜಿ ಅವರಿಗಾಗಿ ಕಳೆದ ಮೂರು ದಿನಗಳಿಂದ ಬಲೆ ಬೀಸಿದ್ದ ಎಸ್‌ಐಟಿ ಅಧಿಕಾರಿಗಳು ಅವರ ಹೈದರಾಬಾದ್ ನಿವಾಸದಲ್ಲಿ ಶೋಧ ನಡೆಸಿದ್ದರು. ನಂತರ ಖಚಿತ ಮಾಹಿತಿ ಆಧರಿಸಿ ಮೈಸೂರಿನಲ್ಲಿ ಇವರನ್ನು ಬಂಧಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿದೆ. 2019ರಿಂದ 2024ರಲ್ಲಿ ನಡೆದಿದೆ ಎನ್ನಲಾದ ಅಬಕಾರಿ ಹಗರಣ ಪ್ರಕರಣದ ಪ್ರಮುಖ ಆರೋಪಿ ಕೇಸಿರೆಡ್ಡಿ ರಾಜ ಶೇಖರ ರೆಡ್ಡಿ ಅವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು.
ವಾಸುದೇವ ರೆಡ್ಡಿ, ಸತ್ಯ ಪ್ರಸಾದ್, ರಾಜಂಪೇಟ್ ಸಂಸದ ಪಿ.ವಿ.ಮಿಥುನ್ ರೆಡ್ಡಿ, ವಿ.ವಿಜಯಸಾಯಿ ರೆಡ್ಡಿ, ಸಜ್ಜಲ ಶ್ರೀಧರ ರೆಡ್ಡಿ, ನಿವೃತ್ತ ಐಎಎಸ್ ಅಧಿಕಾರಿ ಧನಂಜಯ ರೆಡ್ಡಿ, ಕೃಷ್ಣ ಮೋಹನ ರೆಡ್ಡಿ ಮತ್ತು ಗೋವಿಂದಪ್ಪ ಪ್ರಕರಣದ ಪ್ರಮುಖ ಆರೋಪಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.