ADVERTISEMENT

ಆಂಧ್ರ ಪ್ರದೇಶ: ಎಸಿಬಿ ದಾಳಿ, YSRCP ಮಾಜಿ ಸಚಿವ ಜೋಗಿ ರಮೇಶ್ ಮಗನ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2024, 8:09 IST
Last Updated 13 ಆಗಸ್ಟ್ 2024, 8:09 IST
<div class="paragraphs"><p>ಮಾಜಿ ಸಚಿವ ಜೋಗಿ ರಮೇಶ್ ಅವರ ನಿವಾಸದ ಮೇಲೆ&nbsp;ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ</p></div>

ಮಾಜಿ ಸಚಿವ ಜೋಗಿ ರಮೇಶ್ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ

   

–ಎಕ್ಸ್ (ಟ್ವಿಟರ್) ಚಿತ್ರ

ಅಮರಾವತಿ: ಆಂಧ್ರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಇಂದು (ಮಂಗಳವಾರ) ಇಬ್ರಾಹಿಂಪಟ್ಟಣಂನಲ್ಲಿರುವ ಮಾಜಿ ಸಚಿವ ಜೋಗಿ ರಮೇಶ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಶೋಧ ನಡೆಸುತ್ತಿದ್ದಾರೆ.

ಅಗ್ರಿಗೋಲ್ಡ್ ಜಮೀನು ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಗಿ ರಮೇಶ್ ಅವರ ಪುತ್ರ ರಾಜೀವ್‌ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಾಜೀವ್ ಬಂಧನ ಖಂಡಿಸಿರುವ ಜೋಗಿ ರಮೇಶ್, ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.