ADVERTISEMENT

ಆಂಧ್ರಪ್ರದೇಶ | ಕೆ.ಜಿ ಬಾಳೆಹಣ್ಣಿಗೆ ₹50 ಪೈಸೆ: ಸರ್ಕಾರದ ವಿರುದ್ಧ ಜಗನ್‌ ಕಿಡಿ

ಪಿಟಿಐ
Published 2 ಡಿಸೆಂಬರ್ 2025, 6:59 IST
Last Updated 2 ಡಿಸೆಂಬರ್ 2025, 6:59 IST
<div class="paragraphs"><p> ಜಗನ್‌ ಮೋಹನ್‌ ರೆಡ್ಡಿ</p></div>

ಜಗನ್‌ ಮೋಹನ್‌ ರೆಡ್ಡಿ

   

ಅಮರಾವತಿ: ಆಂಧ್ರಪ್ರದೇಶದಲ್ಲಿ ಒಂದು ಕೆ.ಜಿ ಬಾಳೆಹಣ್ಣು ₹50 ಪೈಸೆಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಇದು ಒಂದು ಬೆಂಕಿಪೊಟ್ಟಣ ಅಥವಾ ಒಂದು ಬಿಸ್ಕತ್‌ಗಿಂತ ಕಡಿಮೆ ಬೆಲೆಯಾಗಿದೆ. ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಆರೋಪಿಸಿದ್ದಾರೆ.

ಲಕ್ಷಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿ ತಿಂಗಳುಗಟ್ಟಲೆ ಶ್ರಮಪಟ್ಟ ರೈತರನ್ನು ಸರ್ಕಾರ ನಿರ್ದಯವಾಗಿ ನೋಡುತ್ತಿದೆ. ಇದರಿಂದ ರೈತರು ನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿರುವ ಜಗನ್, ‘ಹಲೋ ಭಾರತ. ಆಂಧ್ರಪ್ರದೇಶದತ್ತ ಒಮ್ಮೆ ನೋಡಿ. ಒಂದು ಕೆ.ಜಿ ಬಾಳೆಹಣ್ಣು ಕೇವಲ ₹50 ಪೈಸೆಗೆ ಮಾರಾಟವಾಗುತ್ತಿದೆ. ಇದು ಆಂಧ್ರಪ್ರದೇಶದಲ್ಲಿ ಬಾಳೆ ಬೆಳೆಯುವ ರೈತರ ದುಃಸ್ಥಿತಿ. ಕೇವಲ ಬಾಳೆಹಣ್ಣಲ್ಲ ಈರುಳ್ಳಿ, ಟೊಮೆಟೊ ಸೇರಿದಂತೆ ಇತರ ಬೆಳೆಗಳೂ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರವು ಭರವಸೆ ನೀಡಿದಂತೆ ಉಚಿತ ಬೆಳೆ ವಿಮೆ, ವಿಪತ್ತುಗಳ ಸಮಯದಲ್ಲಿ ಸಹಾಯಧನ ಮತ್ತು ಬೆಂಬಲ ಬೆಲೆಯನ್ನೂ ರೈತರಿಗೆ ನೀಡಿಲ್ಲ’ ಎಂದಿದ್ದಾರೆ.

ಈ ಕುರಿತು ಟಿಡಿಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.