ADVERTISEMENT

ಆಂಧ್ರದಲ್ಲಿ ಉರುಳಿಬಿದ್ದ ಖಾಸಗಿ ಬಸ್‌: ಬಂಗಾಳ ಮೂಲದ 10 ವಲಸೆ ಕಾರ್ಮಿಕರಿಗೆ ಗಾಯ

ಏಜೆನ್ಸೀಸ್
Published 26 ಮೇ 2020, 7:44 IST
Last Updated 26 ಮೇ 2020, 7:44 IST
ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಮಂದಾಸಾ ಬಳಿ ಉರುಳಿ ಬಿದ್ದಿರುವ ಖಾಸಗಿ ಬಸ್‌
ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಮಂದಾಸಾ ಬಳಿ ಉರುಳಿ ಬಿದ್ದಿರುವ ಖಾಸಗಿ ಬಸ್‌    

ಹೈದರಾಬಾದ್‌: ಬೆಂಗಳೂರಿನಿಂದ ಕೋಲ್ಕತ್ತಗೆ ತೆರಳುತ್ತಿದ್ದ ಖಾಸಗಿ ಬಸ್‌ ಒಂದು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಮಂದಾಸಾ ಬಳಿ ಉರುಳಿಬಿದ್ದ ಪರಿಣಾಮ 10 ವಲಸೆ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡ ವಲಸೆ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ ವಾಸವಾಗಿದ್ದ ಕಾರ್ಮಿಕರು ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಖಾಸಗಿ ಬಸ್‌ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದರು. ಆ ವೇಳೆ ಆಂದ್ರದ ಶ್ರೀಕಾಕುಲಂ ಜಿಲ್ಲೆಯ ಮಂದಾಸಾ ಬಳಿ ಬಸ್‌ ಉರುಳಿಬಿದ್ದಿದೆ.

ADVERTISEMENT

ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾದ ನಂತರ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುವ ವಾಹನಗಳು ಅಪಘಾತಕ್ಕೀಡಾಗುವ ಘಟನೆಗಳು ಹೆಚ್ಚುತ್ತಲೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.