
ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ ದುರಂತ
(ಪಿಟಿಐ ಚಿತ್ರ)
ಕಾಸಿಬುಗ್ಗಾ (ಆಂಧ್ರ ಪ್ರದೇಶ): ‘ಅಷ್ಟೊಂದು ಜನರು ಬಂದರೆ ನಾನೇನು ಮಾಡಲಿ? ಸರತಿ ಸಾಲಿನಲ್ಲಿ ಸಾಗಿ ದರ್ಶನ ಪಡೆಯುವಂತೆ ಭಕ್ತರನ್ನು ಕಳುಹಿಸುತ್ತೇನೆ. ಆದರೆ, ಶನಿವಾರ ಬಹಳಷ್ಟು ಜನರು ಬಂದಿದ್ದರು. ನಾನು ಪೊಲೀಸರಿಗೂ ಮಾಹಿತಿ ನೀಡಿಲ್ಲ’ ಎಂದು ಶ್ರೀಕಾಕುಳಂನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಸ್ಥಾಪಕ ಹರಿಮುಕುಂದ ಪಾಂಡಾ ತಿಳಿಸಿದರು.
‘ನನಗೆ ಧೈರ್ಯವಿದೆ. ನಾನು ಪೊಲೀಸರಿಗೆ ತಿಳಿಸಲಿಲ್ಲ. ಸರತಿಯಲ್ಲಿ ಹೋಗುವಂತೆ ಹೇಳಿದೆ. ಅವರು ನುಗ್ಗಿದರೆ, ಪರಿಸ್ಥಿತಿ ಈ ರೀತಿಯಾದರೆ ನಾನೇನು ಮಾಡಲಿ? ನಾನು ಬೆಳಿಗ್ಗೆ 3ರವರೆಗೆ ಊಟ ಮಾಡದೆಯೇ ದೇವಸ್ಥಾನದಲ್ಲಿ ಹಾಜರಿದ್ದೆ’ ಎಂದರು. ದೇವಸ್ಥಾನದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ 10 ಮಂದಿ ಮೃತಪಟ್ಟಿದ್ದರು.
‘ಸೂಕ್ತ ದಾಖಲೆಗಳೇ ಇಲ್ಲ’: ‘ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಖಾಸಗಿ ಜಮೀನಿನಲ್ಲಿದೆ. ದೇವಸ್ಥಾನ ನಡೆಸಲು ಇವರ ಬಳಿ ಸೂಕ್ತ ಕಾಗದ ಪತ್ರಗಳಿಲ್ಲ. ಆಯೋಜಕರು ಸುರಕ್ಷತಾ ಕ್ರಮಗಳನ್ನೂ ತೆಗೆದುಕೊಂಡಿಲ್ಲ. ಆಯೋಜಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿ ವಿವಿಧ ಸೆಕ್ಷನ್‌ಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಶ್ರೀಕಾಕುಳಂ ಜಿಲ್ಲಾ ಎಸ್‌ಪಿ ಕೆ.ವಿ. ಮಹೇಶ್ವರ ರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.