ADVERTISEMENT

ಬಾಡಿ ಶೇಮಿಂಗ್ ಬಗ್ಗೆ ಸಿಡಿದ ಸಿತಾರ್ ವಾದಕಿ ಅನುಷ್ಕಾ ಶಂಕರ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 10:05 IST
Last Updated 5 ಸೆಪ್ಟೆಂಬರ್ 2025, 10:05 IST
Venugopala K.
   Venugopala K.

ನವದೆಹಲಿ: ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಫೋಟೊಗಳು ಮತ್ತು ಸ್ಟೋರಿಗಳ ಬಗ್ಗೆ ಅನಪೇಕ್ಷಿತ ಲೈಂಗಿಕ ಕಾಮೆಂಟ್‌ಗಳು ಹಾಗೂ ಬಾಡಿ ಶೇಮಿಂಗ್ ಟ್ರೋಲ್‌ಗಳ ಬಗ್ಗೆ ಸಿತಾರ್ ವಾದಕಿ ಅನುಷ್ಕಾ ಶಂಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದು ನನ್ನ ದೇಹ, ಈ ಬಗ್ಗೆ ಕಾಮೆಂಟ್ ಮಾಡಲು ಬೇರೆಯವರಿಗೆ ಯಾವುದೇ ಹಕ್ಕಿಲ್ಲ ಎಂದಿದ್ದಾರೆ.

ಅಪರಿಚಿತ ಪುರುಷರು ತಮ್ಮ ಬಟ್ಟೆ ಮತ್ತು ದೇಹದ ಬಗ್ಗೆ ಲೈಂಗಿಕ ಕಾಮೆಂಟ್‌ಗಳನ್ನು ಮಾಡಿರುವ ಚಿತ್ರಗಳನ್ನು ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ಪುತ್ರಿ ಸಂಗೀತಗಾರ್ತಿ ಅನುಷ್ಕಾ ಹಂಚಿಕೊಂಡಿದ್ದಾರೆ.

ADVERTISEMENT

‘ಭಾರತೀಯ ಶಾಸ್ತ್ರೀಯ ಸಂಗೀತ ಅತ್ಯಂತ ಪವಿತ್ರವಾದದ್ದು. ಆದರೆ, ನೀವು ಧರಿಸಿರುವ ಉಡುಪು ಹೊಂದಿಕೆಯಾಗುವುದಿಲ್ಲ’ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ‘ನೀವು ಧನ್ಯರು. ಆದರೆ, ಕ್ಲೀವೇಜ್ ಅನ್ನು ತೋರಿಸಬೇಕಾಗಿಲ್ಲ’ಎಂದು ಬರೆದಿದ್ದಾರೆ.

ಈ ಬಗ್ಗೆ ಪೋಸ್ಟ್ ಮಾಡಿರುವ ಅನುಷ್ಕಾ, ‘ಇಲ್ಲಿ ಇದು ಒಂದು ದೇಹ. ಒಂದರ್ಥದಲ್ಲಿ ಇದು ದೇಹ ಮಾತ್ರ (ಎಲ್ಲರಿಗೂ ಇದೆ). ಹೀಗಾಗಿ ಏನೂ ವಿಶೇಷ ಅನಿಸದು. ಮತ್ತೊಂದು ಮಗ್ಗುಲಿನಲ್ಲಿ ಇದು ನಿಜಕ್ಕೂ ಪವಾಡವೇ ಸರಿ. ನನ್ನ ದೇಹ ಏನನ್ನೆಲ್ಲಾ ಅನುಭವಿಸಿದೆಯೋ, ಅದನ್ನು ಯೋಚಿಸಿದರೆ ಹೃದಯ ಕೃತಜ್ಞತೆಯಿಂದ ತುಂಬುತ್ತದೆ‘ ಎಂದು ಬರೆದುಕೊಂಡಿದ್ದಾರೆ.

ನನ್ನ ದೇಹವು ನನ್ನ ಪರವಾದ ಒಬ್ಬ ಯೋಧನಿದ್ದಂತೆ. ಈ ದೇಹವು ಎರಡು ಮಕ್ಕಳಿಗೆ ಜನ್ಮ ನೀಡಿದೆ. ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಪುರುಷರ ಹಲವಾರು ದೌರ್ಜನ್ಯ ಸನ್ನಿವೇಶಗಳಿಂದ ಬದುಕುಳಿದಿದೆ. ನಾಲ್ಕು ಪ್ರಮುಖ ಶಸ್ತ್ರಚಿಕಿತ್ಸೆಗಳು ನಡೆದು ಗುಣಮುಖವಾಗಿದೆ. ಹನ್ನೊಂದು ವರ್ಷದಿಂದ ಮುಟ್ಟಿನ ಸಂದರ್ಭದಲ್ಲಿನ ತೀವ್ರ ನೋವು ಮತ್ತು ಮೈಗ್ರೇನ್‌ ಜೊತೆಗೆ ಪಿಸಿಒಡಿಯಿಂದ ಬಳಲಿದೆ ಎಂದಿದ್ದಾರೆ.

‘ಇಲ್ಲಿಯವರೆಗೂ ಹೋರಾಟ ಮಾಡಿರುವ ನನ್ನ ದೇಹವನ್ನು ನಾನು ಪ್ರೀತಿಸುತ್ತೇನೆ. ಬೇರೊಬ್ಬರ ದೇಹದ ಕುರಿತಂತೆ ಯಾರೋ ಒಬ್ಬರು ಹೇಗೆ ನಿರ್ಣಯಿಸುತ್ತಾರೆ. ಅದು ಅವರ ಹಕ್ಕೆಂದು ಹೇಗೆ ಭಾವಿಸುತ್ತಾರೆ. ನಾವು 2025ರಲ್ಲಿದ್ದೇವೆ. ಇನ್ನಾದರೂ ಇವುಗಳನ್ನೆಲ್ಲ ಬಿಡೋಣ’ಎಂದು ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.