ADVERTISEMENT

ಕ್ಷಿಪಣಿ ಪರೀಕ್ಷೆ ಯಶಸ್ವಿ

ಏಜೆನ್ಸೀಸ್
Published 30 ಅಕ್ಟೋಬರ್ 2020, 9:17 IST
Last Updated 30 ಅಕ್ಟೋಬರ್ 2020, 9:17 IST
ನೌಕೆ ನಿರೋಧಕ ಕ್ಷಿಪಣಿಯನ್ನು (ಎಎಸ್‌ಎಚ್‌ಎಂ) ಐಎನ್‌ಎಸ್‌ ಕೋರಾ ನೌಕೆಯಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು (ಎಎನ್‌ಐ ಟ್ವಿಟರ್‌ ಚಿತ್ರ)
ನೌಕೆ ನಿರೋಧಕ ಕ್ಷಿಪಣಿಯನ್ನು (ಎಎಸ್‌ಎಚ್‌ಎಂ) ಐಎನ್‌ಎಸ್‌ ಕೋರಾ ನೌಕೆಯಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು (ಎಎನ್‌ಐ ಟ್ವಿಟರ್‌ ಚಿತ್ರ)   

ನವದೆಹಲಿ: ಭಾರತೀಯ ನೌಕಾಪಡೆ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ನೌಕೆ ನಿರೋಧಕ ಕ್ಷಿಪಣಿಯನ್ನು (ಎಎಸ್‌ಎಚ್‌ಎಂ) ಐಎನ್‌ಎಸ್‌ಕೋರಾ ನೌಕೆಯಿಂದ ಶುಕ್ರವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ನಡೆದ ಈ ಪರೀಕ್ಷೆಯಲ್ಲಿ, ಕ್ಷಿಪಣಿ ಯುದ್ಧನೌಕೆಯೊಂದರ ಮೇಲೆ ನಿಖರವಾಗಿ ದಾಳಿ ನಡೆಸಿ, ಅದನ್ನು ಧ್ವಂಸ ಮಾಡಿದೆ.

ಕುಶಲ ತಂತ್ರಜ್ಞಾನ ಹೊಂದಿರುವ, ನಿಖರತೆಯೊಂದಿಗೆ ಗುರಿ ಸಾಧಿಸುವಂತಹ ಈ ಕ್ಷಿಪಣಿ ಐಎನ್‌ಎಸ್‌ ಪ್ರಬಲ್‌ ನೌಕೆಯಿಂದ ಗುರಿಯತ್ತ ಚಿಮ್ಮಿದದೃಶ್ಯಗಳನ್ನು ಭಾರತೀಯ ನೌಕಾಪಡೆ ಅಕ್ಟೋಬರ್‌ 23ರಂದುಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.