ADVERTISEMENT

ಸೇನಾಪಡೆಯಉಪ ಮುಖ್ಯಸ್ಥರಾಗಿನರವಣೆ ನೇಮಕ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:35 IST
Last Updated 22 ಜುಲೈ 2019, 19:35 IST

ನವದೆಹಲಿ: ಭಾರತೀಯ ಸೇನಾಪಡೆಯ ಉಪ ಮುಖ್ಯಸ್ಥರಾಗಿ ಲೆಫ್ಟಿನಂಟ್‌ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಲೆಫ್ಟಿನಂಟ್‌ ಜನರಲ್‌ ಡಿ.ಅನ್ಬು ಅವರು ಆಗಸ್ಟ್ 31ರಂದು ನಿವೃತ್ತರಾಗಲಿದ್ದು, ತೆರವಾಗುವ ಸ್ಥಾನಕ್ಕಾಗಿ ಈ ನೇಮಕ ನಡೆದಿದೆ.

ಸೇನಾಪಡೆ ಮುಖ್ಯಸ್ಥ ಬಿಪಿನ್‌ ರಾವತ್‌ ಇದೇ ವರ್ಷದ ಡಿಸೆಂಬರ್‌ 31ರಂದು ನಿವೃತ್ತರಾಗಲಿದ್ದಾರೆ. ಇವರ ನಂತರ ನರವಣೆ ಅವರೇ ಅತ್ಯಂತ ಹಿರಿಯ ಅಧಿಕಾರಿಯಾಗಿದ್ದು, ಸೇನಾಪಡೆಯ ಮುಂದಿನ ಮುಖ್ಯಸ್ಥ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT