ADVERTISEMENT

ಜಮ್ಮು: ಗಡಿಯಲ್ಲಿ ಪಾಕಿಸ್ತಾನದ ಡ್ರೋನ್‌ಗೆ ಗುಂಡು ಹಾರಿಸಿದ ಭಾರತೀಯ ಸೇನೆ

ಪಿಟಿಐ
Published 22 ಜನವರಿ 2025, 6:41 IST
Last Updated 22 ಜನವರಿ 2025, 6:41 IST
<div class="paragraphs"><p>ಡ್ರೋನ್ </p></div>

ಡ್ರೋನ್

   

-ರಾಯಿಟರ್ಸ್‌ ಚಿತ್ರ

ಮೆಂಡರ್ / ಜಮ್ಮು: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಮೂಲಕ ಭಾರತ ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್‌ ಪಡೆಗಳ ಮೇಲೆ ಸೇನಾಪಡೆಗಳು ಗುಂಡು ಹಾರಿಸಿವೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ADVERTISEMENT

ಮೆಂಡರ್ ಸೆಕ್ಟರ್‌ನ ಗಡಿ ಬೇಲಿ ಬಳಿಯ ಪ್ರದೇಶದ ಮೇಲೆ ಕೆಲಹೊತ್ತು ಹಾರಾಡಿದ ಡ್ರೋನ್, ನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಮರಳಿತು ಎಂದು ಅವರು ಹೇಳಿದ್ದಾರೆ.

ಮಧ್ಯರಾತ್ರಿ 1 ಗಂಟೆ ವೇಳೆಗೆ ಡ್ರೋನ್ ಹಾರಾಟ ಕಂಡುಬಂದಿದೆ. ಈ ವೇಳೆ 12 ಸುತ್ತು ಗುಂಡು ಹಾರಿಸಲಾಗಿದೆ.

ಡ್ರೋನ್‌ನಿಂದ ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಮಾದಕವಸ್ತುಗಳು ಬೀಳದಂತೆ ಖಚಿತಪಡಿಸಿಕೊಳ್ಳಲು ಬುಧವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ವರದಿಗಳು ಬಂದಾಗ ಶೋಧ ಕಾರ್ಯಾಚರಣೆ ಮುಂದುವರೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.