ADVERTISEMENT

ಜಮ್ಮು–ಕಾಶ್ಮೀರ: ಬಂಧಿತ ಪಾಕಿಸ್ತಾನಿ ಉಗ್ರ ಹೃದಯಾಘಾತದಿಂದ ಸಾವು

ಪಿಟಿಐ
Published 4 ಸೆಪ್ಟೆಂಬರ್ 2022, 6:12 IST
Last Updated 4 ಸೆಪ್ಟೆಂಬರ್ 2022, 6:12 IST
   

ಜಮ್ಮು: ದೇಶದ ಗಡಿಯೊಳಕ್ಕೆ ನುಸುಳುವ ಯತ್ನದಲ್ಲಿದ್ದಾಗ ಭದ್ರತಾ ಪಡೆಗಳ ಕೈಗೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದ ಪಾಕಿಸ್ತಾನದ ಉಗ್ರನೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಲಷ್ಕರ್ ಇ ತಯ್ಯಬಾ ಗುಂಪಿನ ಉಗ್ರ ತಬ್ರಕ್ ಹುಸೇನ್ (32) ಎಂಬಾತನನ್ನು ಆಗಸ್ಟ್ 21ರಂದು ಬಂಧಿಸಲಾಗಿತ್ತು.

ಉಗ್ರ ತಬ್ರಕ್‌ನ ಬಂಧನದ ಸಂದರ್ಭ ಗುಂಡು ಹಾರಿಸಲಾಗಿದ್ದು, ಗಾಯಗೊಂಡಿದ್ದ ಆತನನ್ನು ರಾಜೋರಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ADVERTISEMENT

ಉಗ್ರನ ಜೀವ ಉಳಿಸಲು ಯೋಧರು ಮೂರು ಯುನಿಟ್ ರಕ್ತ ನೀಡಿದ್ದರು. ಅದಾದ ಬಳಿಕ ಆತನಿಗೆ ಸರ್ಜರಿ ನಡೆಸಲಾಗಿತ್ತು.

ಶನಿವಾರ ಸಂಜೆ ಉಗ್ರನಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.

ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದಾಗಿ ಬಂಧಿತ ಉಗ್ರ ತಬ್ರಕ್, ವಿಚಾರಣೆಯ ವೇಳೆ ಬಹಿರಂಗಪಡಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.