ADVERTISEMENT

ಇಟಾನಗರ: ಇನ್ನರ್‌ ಲೈನ್‌ ಪರ್ಮಿಟ್‌ ಇಲ್ಲದೆ ವಾಸಿಸುತ್ತಿದ್ದ 39 ಮಂದಿ ಬಂಧನ

ಪಿಟಿಐ
Published 15 ಜುಲೈ 2025, 13:34 IST
Last Updated 15 ಜುಲೈ 2025, 13:34 IST
.
.   

ಇಟಾನಗರ: ಇನ್ನರ್‌ ಲೈನ್‌ ಪರ್ಮಿಟ್‌ (ಐಎಲ್‌ಪಿ) ಇಲ್ಲದೆ ವಾಸಿಸುತ್ತಿದ್ದ 39 ಮಂದಿಯನ್ನು ಅರುಣಾಚಲಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಬಂದೇರ್‌ದೇವಾ, ಕರ್ಸಿಂಗ್ಸಾ, ನಾಹರ್ಲಾಗುನ್‌ ಹಾಗೂ ಪಪು ಹಿಲ್ಸ್‌ ಪ್ರದೇಶಗಳಲ್ಲಿ ಕಾರ್ಮಿಕರ ಶಿಬಿರಗಳು, ಕೆಲಸದ ಸ್ಥಳಗಳು ಹಾಗೂ ರಸ್ತೆ ಬದಿಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ಮುಂದಿನ ಕಾನೂನು ಕ್ರಮಕ್ಕಾಗಿ ಬಂಧಿತರನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಅವರ ವಶಕ್ಕೆ ನೀಡಲಾಗಿದೆ ಎಂದು ಎಸ್‌ಪಿ ನೈಲಾಮ್‌ ನೆಗಾ ತಿಳಿಸಿದ್ದಾರೆ.

ಸ್ಥಳೀಯರಲ್ಲದ ಭಾರತೀಯ ನಾಗರಿಕರು ಅರುಣಾಚಲ ಪ್ರದೇಶದೊಳಗೆ ಪ್ರವೇಶಿಸಲು ಐಎಲ್‌ಪಿ ಅಗತ್ಯವಿದೆ. ಸ್ಥಳೀಯ ಬುಡಕಟ್ಟುಗಳ ಪರಂಪರೆ, ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸಲು ಹಾಗೂ ಹೊರಗಿನ ಜನರ ಪ್ರವೇಶವನ್ನು ನಿರ್ವಹಿಸಲು ಐಎಲ್‌ಪಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.