ADVERTISEMENT

ದೇಶದಲ್ಲಿ ಲಸಿಕೆ ಉತ್ಪಾದನೆಗೆ ವಿದೇಶಿ ಕಂಪನಿಗಳಿಗೂ ಅವಕಾಶ ನೀಡಿ: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 22 ಮೇ 2021, 12:05 IST
Last Updated 22 ಮೇ 2021, 12:05 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ದೇಶದಲ್ಲಿ ಲಸಿಕೆ ಉತ್ಪಾದಿಸಲು ವಿದೇಶಿ ಕಂಪನಿಗಳಿಗೂ ಅವಕಾಶ ಕಲ್ಪಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶನಿವಾರ ಒತ್ತಾಯಿಸಿದ್ದಾರೆ. ಲಸಿಕೆ ಕೊರತೆ ಕಾರಣ ಭಾನುವಾರದಿಂದ ಯುವಜನರಿಗೆ ಲಸಿಕೆ ನೀಡುವ ಕೇಂದ್ರಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.

ಭಾರತ್‌ ಬಯೊಟೆಕ್‌ ಸಂಸ್ಥೆಯು ಕೋವ್ಯಾಕ್ಸಿನ್ ಲಸಿಕೆಯ ಸೂತ್ರವನ್ನು ಹಂಚಿಕೊಳ್ಳಲು ಒಪ್ಪಿರುವ ಕಾರಣ ಮುಂದಿನ 24 ಗಂಟೆಗಳಲ್ಲಿ ಈ ಕುರಿತು ಕ್ರಮವಹಿಸಲು ಔಷಧ ಕಂಪನಿಗಳಿಗೆ ಕೇಂದ್ರ ಸೂಚಿಸಬೇಕು. ಅಲ್ಲದೆ, ವಿದೇಶಿ ಕಂಪನಿಗಳಿಗೂ ಭಾರತದಲ್ಲಿ ಲಸಿಕೆ ಉತ್ಪಾದಿಸಲು ಅವಕಾಶ ಕಲ್ಪಿಸಬೇಕು. ಅಲ್ಲದೆ, ಅಗತ್ಯ ಪ್ರಮಾಣದಲ್ಲಿ ವಿದೇಶಗಳಿಂದಲೂ ತರಿಸಿಕೊಳ್ಳಲು ಒತ್ತು ನೀಡಬೇಕು ಎಂದೂ ಸಲಹೆ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯನ್ನು ಪೂರೈಸಬೇಕು. ಯುವಜನರಿಗೆ ನೀಡಲು ದೆಹಲಿಗೆ ತಕ್ಷಣಕ್ಕೆ 80 ಲಕ್ಷ ಡೋಸ್‌ಗಳ ಲಸಿಕೆ ಅಗತ್ಯವಿದೆ. ಸದ್ಯ ಕೇವಲ 16 ಲಕ್ಷ ಡೋಸ್‌ಗಳನ್ನಷ್ಟೇ ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ದೆಹಲಿ ಕೋಟಾ ಪ್ರಮಾಣವನ್ನು ಕೇಂದ್ರ ಕಳೆದ ಜೂನ್‌ನಲ್ಲಿ ತಗ್ಗಿಸಿತ್ತು. ಎಲ್ಲ ವಯಸ್ಕರಿಗೂ ಲಸಿಕೆ ನೀಡಲು ದೆಹಲಿಗೆ 2.5 ಕೋಟಿ ಲಸಿಕೆ ಅಗತ್ಯವಿದೆ. ಕೋಟಾ ಹೆಚ್ಚಿಸಬೇಕು ಹಾಗೂ ಪೂರೈಸಲು ಕ್ರಮವಹಿಸಬೇಕು ಎಂದು ಆಗ್ರಹಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.