ADVERTISEMENT

ಕೇಜ್ರಿವಾಲ್ ತುಕ್ಡೇ ತುಕ್ಡೇ ಗ್ಯಾಂಗ್‌ನ್ನು ಬೆಂಬಲಿಸುತ್ತಿದ್ದಾರೆ: ನಡ್ಡಾ ಆರೋಪ

ಪಿಟಿಐ
Published 27 ಜನವರಿ 2020, 10:10 IST
Last Updated 27 ಜನವರಿ 2020, 10:10 IST
   

ನವದೆಹಲಿ:ದೇಶವನ್ನು ವಿಭಜಿಸಲು ಬಯಸುವ ಜನರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಇತರರ ವಿರುದ್ಧವಿರುವ ದೇಶದ್ರೋಹ ಪ್ರಕರಣದ ವಿಚಾರಣೆ ನಡೆಸಲು ಎಎಪಿ ಸರ್ಕಾರ ಪೊಲೀಸರಿಗೆ ಅನುಮತಿ ನೀಡುತ್ತಿಲ್ಲ.

ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಂಡರೆ ಅದು ಮತ ಬ್ಯಾಂಕ್ ಮೇಲೆ ಪ್ರಭಾವ ಬೀರಲಿದೆಯೇ ಎಂದು ನಡ್ಡಾ ಪ್ರಶ್ನಿಸಿದ್ದಾರೆ.

ADVERTISEMENT

ಭಾರತವನ್ನು ನಾವು ವಿಭಜಿಸುತ್ತೇವೆ( ಭಾರತ್ ತೇರೇ ತುಕ್ಡೇ ಹೋಂಗೇ ) ಎಂದು ಕನ್ಹಯ್ಯಾ ಕುಮಾರ್, ಉಮರ್ ಖಾಲೀದ್ ಮತ್ತು ಇತರ ದೇಶದ್ರೋಹಿ ಶಕ್ತಿಗಳು ಜೆಎನ್‌ಯುನಲ್ಲಿ ಘೋಷಣೆ ಕೂಗಿದ್ದರು.

ದೇಶದ ಸೌರ್ವಭೌಮ ಪ್ರಜಾಪ್ರಭುತ್ವ ಪದ್ಧತಿಯನ್ನು ಉಲ್ಲಂಘಿಸುವ ಬೆದರಿಕೆಯನ್ನು ಅವರು ಒಡ್ಡುತ್ತಿದ್ದಾರೆ. ಕಾನೂನು ಸಂಸ್ಥೆಗಳು ಈ ಬಗ್ಗೆ ತನಿಖೆ ನಡೆಸಿದ್ದು ಜನವರಿ2019ರಲ್ಲಿ ಆರೋಪಪಟ್ಟಿ ಸಲ್ಲಿಸಲು ಸಿದ್ಧವಾಗಿವೆ ಎಂದು ನಡ್ಡಾ ಟ್ವೀಟಿಸಿದ್ದಾರೆ.

ತುಕ್ಡೇ ತುಕ್ಡೇ ಗ್ಯಾಂಗ್‌ನ್ನು ವಿಚಾರಣೆಗೊಳಪಡಿಸಲು ಪೊಲೀಸರು ಕೇಜ್ರಿವಾಲ್ ಅನುಮತಿ ಕೇಳಿದ್ದರು. ಆದರೆ ಇಲ್ಲಿಯವರಿಗೆ ಅನುಮತಿ ನೀಡಿಲ್ಲ. ದೇಶವನ್ನು ವಿಭಜನೆ ಮಾಡುವವರಿಗೆ ಯಾಕೆ ಬೆಂಬಲ ನೀಡುತ್ತಿರುವುದು ಎಂಬುದನ್ನು ಕೇಜ್ರಿವಾಲ್ ದೆಹಲಿ ಜನತೆಗೆ ಹೇಳಬೇಕು ಎಂದು ನಡ್ಡಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.