ADVERTISEMENT

ರಾಮಮಂದಿರಾ ನಿರ್ಮಾಣ ವಿಳಂಬ ಯಾಕೆ? ಮೋದಿಗೆ ಉದ್ದವ್ ಠಾಕ್ರೆ ಪ್ರಶ್ನೆ? 

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 2:21 IST
Last Updated 19 ಅಕ್ಟೋಬರ್ 2018, 2:21 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿರುವ ಮಿತ್ರ ಪಕ್ಷ ಶಿವಸೇನಾ 'ಅಯೋಧ್ಯೆಯಲ್ಲಿ ರಾಮಮಂದಿರಾ ನಿರ್ಮಾಣ’ ಮಾಡುವುದಕ್ಕೆ ವಿಳಂಬ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡಿದೆ.

ಇಲ್ಲಿನ ನಡೆದ ವಾರ್ಷಿಕ ವಿಜಯದಶಮಿ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಿವಸೇನಾ ಮುಖ್ಯಸ್ಥ ಉದ್ದವ್ ಠಾಕ್ರೆ . ಭೂಗೋಳ ಪಠ್ಯಪುಸ್ತಕದಲ್ಲಿ ನಾವು ಕೇಳಿರದ ದೇಶಗಳಿಗೆ ನೀವು ಭೇಟಿ ನೀಡುತ್ತೀರಿ ?ಆದರೆ ಇಲ್ಲಿಯವರೆಗೂ ಅಯೋಧ್ಯೆಗೆ ಯಾಕೆ ಹೋಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಬರುವ ನವೆಂಬರ್ 25ರಂದು ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ರಾಮಮಂದಿರ ನಿರ್ಮಾಣ ಮಾಡಲಿಲ್ಲ, ನೀವು ಜನರಿಗೆ ಇಂತಹ ಎಷ್ಟು ಸುಳ್ಳಿನ ಭರವಸೆಗಳನ್ನು ನೀಡುತ್ತೀರಾ? ಎಂದು ಕುಟುಕಿದರು.

ತಮ್ಮ ಭಾಷಣದ ಉದ್ದಕ್ಕೂ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಉದ್ದವ್ ಠಾಕ್ರೆ, ಬಿಜೆಪಿ ಸರ್ಕಾರ ಹಣದುಬ್ಬರ ನಿಯಂತ್ರಿಸುವಲ್ಲಿ ಮತ್ತುಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.