ADVERTISEMENT

ಅಸ್ಸಾಂ ವಿಧಾನಸಭಾ ಚುನಾವಣೆ: ₹ 18 ಕೋಟಿ ಮೌಲ್ಯದ ವಸ್ತು ವಶ

ಪಿಟಿಐ
Published 9 ಮಾರ್ಚ್ 2021, 10:18 IST
Last Updated 9 ಮಾರ್ಚ್ 2021, 10:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುವಾಹಟಿ: ‘ಅಸ್ಸಾಂನಲ್ಲಿ ಮತದಾರರನ್ನು ಆಮಿಷಗಳ ಮೂಲಕ ಸೆಳೆಯುವ ಪ್ರಯತ್ನ ನಡೆಯುತ್ತಿದ್ದು, ಈವರೆಗೆ ವಿವಿಧ ಸಂಸ್ಥೆಗಳು ₹ 18 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿವೆ. ಅಲ್ಲದೆ ಕಳೆದ 11 ದಿನಗಳಲ್ಲಿ 110 ಜನರನ್ನು ಬಂಧಿಸಿವೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.

‘ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಆರಂಭಗೊಂಡು 24 ಗಂಟೆಗಳ ಅವಧಿಯಲ್ಲಿ ಒಟ್ಟು ₹ 5.72 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅವರು ಹೇಳಿದರು.

‘ಅಸ್ಸಾಂನಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಸೋಮವಾರದ ತನಕ ನಗದು(₹ 4.27 ಕೋಟಿ), ಮಧ್ಯ (₹ 5.52 ಕೋಟಿ ಮೌಲ್ಯದ 3.58 ಲಕ್ಷ ಲೀಟರ್‌), ಡ್ರಗ್ಸ್‌ (₹ 4 ಕೋಟಿ), ಇತರೆ ಮಾದಕ ವಸ್ತುಗಳು (1 ಕೋಟಿ), ಚಿನ್ನ ಮತ್ತು ಬೆಳ್ಳಿ (₹ 3.32 ಕೋಟಿ) ಸೇರಿದಂತೆ ಒಟ್ಟು ₹ 18.31 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದು ಅಸ್ಸಾಂನ ಹಿಂದಿನ ಚುನಾವಣೆ ವೇಳೆಯ ದಾಖಲೆಯನ್ನೂ ಮುರಿದಿದೆ’ ಎಂದು ಅಸ್ಸಾಂನ ಚುನಾವಣಾ ಆಯೋಗ ಹೇಳಿದೆ.

ADVERTISEMENT

‘ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಈವರೆಗೆ ಮಧ್ಯ ಅಕ್ರಮ ಮಾರಾಟದಡಿ 100 ಮಂದಿಯನ್ನು, ಮಾದಕ ವಸ್ತು ಸಂಬಂಧಿತ ಅಪರಾಧಗಳಡಿ 8 ಮಂದಿಯನ್ನು ಬಂಧಿಸಲಾಗಿದೆ’ ಎಂದು ಆಯೋಗ ತಿಳಿಸಿದೆ.

ಅಸ್ಸಾಂನ ವಿಧಾನಸಭಾ ಚುನಾವಣೆಯು ಮಾರ್ಚಚ್‌ 27 ರಿಂದ ಏಪ್ರಿಲ್‌ 6ರ ನಡುವೆ ಮೂರು ಹಂತಗಳಲ್ಲಿ ನಡೆಯಲಿದೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.