ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿರುವಂತೆಯೇ ಬಾಲ ಯೋಗಿ ಹಾಗೂ ಪುಟಾಣಿ ಕೇಜ್ರಿವಾಲ್ ಗಮನ ಸೆಳೆದಿದ್ದಾರೆ.
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಗೆಲುವು ಬಹುತೇಕ ಖಚಿತವಾಗಿರುವ ಹಿನ್ನೆಲೆಯಲ್ಲಿ ಬೆಂಬಲಿಗರು ಸಂಭ್ರಮದ ಅಲೆಯಲ್ಲಿ ತೇಲಾಡುತ್ತಿದ್ದಾರೆ.
ಈ ನಡುವೆ ಬೆಂಬಲಿಗರು ತಮ್ಮ ಮುದ್ದು ಮಕ್ಕಳಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೋಲುವ ಉಡುಗೆ ಧರಿಸುವ ಮೂಲಕ ನಾಯಕರ ಮೇಲಿನ ತಮ್ಮ ಪ್ರೀತಿಯನ್ನು ಮೆರೆದಿದ್ದಾರೆ.
ಲಖನೌದ ಬಿಜೆಪಿ ಕಚೇರಿಯಲ್ಲಿ ಬಾಲ ಯೋಗಿಯ ದರ್ಶನವಾಗಿದೆ. 1.5 ವರ್ಷದ ಬಾಲಕಿ ನವ್ಯಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಅವರನ್ನು ಹೋಲುವ ಉಡುಗೆಯನ್ನು ಧರಿಸಿದ್ದು, ಕೈಯಲ್ಲೊಂದು ಬುಲ್ಡೋಜರ್ ಆಟಿಕೆಯೊಂದಿಗೆ ಕಾಣಿಸಿಕೊಂಡಿದ್ದಾಳೆ.
ಇನ್ನೊಂದೆಡೆ ದೆಹಲಿಯಲ್ಲಿ ಪುಟ್ಟ ಬಾಲಕನಿಗೆ ಕೇಜ್ರಿವಾಲ್ ರೀತಿಯ ಉಡುಗೆ ಧರಿಸಿ ಎಎಪಿ ಬೆಂಬಲಿಗರು ಸಂಭ್ರಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.