ADVERTISEMENT

ಮಹಾರಾಷ್ಟ್ರ: ಔರಂಗಜೇಬ್ ರೈಲು ನಿಲ್ದಾಣ ಇನ್ನುಮುಂದೆ ಛತ್ರಪತಿ ಸಂಭಾಜಿನಗರ ಸ್ಟೇಷನ್

ಪಿಟಿಐ
Published 18 ಅಕ್ಟೋಬರ್ 2025, 9:51 IST
Last Updated 18 ಅಕ್ಟೋಬರ್ 2025, 9:51 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಔರಂಗಜೇಬ್‌ ರೈಲು ನಿಲ್ದಾಣದ ಹೆಸರನ್ನು ಛತ್ರಪತಿ ಸಂಭಾಜಿನಗರ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಮೊಘಲ್‌ ದೊರೆ ಔರಂಗಜೇಬ ಅವರ ಹೆಸರನ್ನು ಹೊಂದಿದ್ದ 'ಔರಂಗಬಾದ್‌'ಗೆ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮೂರು ವರ್ಷಗಳ ಹಿಂದೆ ಮರುನಾಮಕರಣ ಮಾಡಿದ್ದರು. ಮರಾಠ ಸಾಮ್ರಾಟ ಛತ್ರಪತಿ ಶಿವಾಜಿ ಅವರ ಪುತ್ರ ಸಂಭಾಜಿ ಅವರ ಗೌರವಾರ್ಥವಾಗಿ, 'ಛತ್ರಪತಿ ಸಂಭಾಜಿನಗರ' ಎಂದು ಹೆಸರಿಟ್ಟಿದ್ದರು. ಇದೀಗ ನಗರದ ನಿಲ್ದಾಣದ ಹೆಸರನ್ನೂ ಬದಲಿಸಲಾಗಿದೆ.

ADVERTISEMENT

ನಗರದ ಹೆಸರು ಬದಲಾವಣೆ ಕಾರ್ಯವನ್ನು ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿ ಸರ್ಕಾರ ಆರಂಭಿಸಿತ್ತು.

ಸದ್ಯ ಆಡಳಿತದಲ್ಲಿರುವ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ರೈಲು ನಿಲ್ದಾಣದ ಹೆಸರು ಬದಲಾವಣೆ ಸಂಬಂಧ ಅಕ್ಟೋಬರ್‌ 15ರಂದು ಅಧಿಸೂಚನೆ ಹೊರಡಿಸಿತ್ತು ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಔರಂಗಬಾದ್‌ ರೈಲು ನಿಲ್ದಾಣವನ್ನು ಹೈದರಾಬಾದ್‌ ಸಂಸ್ಥಾನದ 7ನೇ ನಿಜಾಮ ಮೀರ್‌ ಒಸ್ಮಾನ್‌ ಅಲಿ ಖಾನ್‌ 1900ನೇ ಇಸವಿಯಲ್ಲಿ ನಿರ್ಮಿಸಿದ್ದರು.

ಹೈದರಾಬಾದ್‌ನ ಕಾಚಿಗುಡ ಹಾಗೂ ಮಹಾರಾಷ್ಟ್ರದ ಮನ್‌ಮದ್‌ ನಡುವೆ ಈ ನಿಲ್ದಾಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.