ADVERTISEMENT

ಆಸ್ಟ್ರೇಲಿಯಾ ಚುನಾವಣೆ: ಮತ್ತೆ ಗೆದ್ದ ಅಲ್ಬನೀಸ್‌ಗೆ ಪ್ರಧಾನಿ ಮೋದಿ ಅಭಿನಂದನೆ

ಪಿಟಿಐ
Published 6 ಮೇ 2025, 9:41 IST
Last Updated 6 ಮೇ 2025, 9:41 IST
   

ನವದೆಹಲಿ: ಆಸ್ಟ್ರೇಲಿಯಾದ ಚುನಾವಣೆಯಲ್ಲಿ ಗೆದ್ದು, ಮತ್ತೆ ಪ್ರಧಾನಿ ಪಟ್ಟಕ್ಕೇರಿರುವ ಆಂಥೋನಿ ಅಲ್ಬನೀಸ್‌ಗೆ ಇಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಎಕ್ಸ್‌’ (ಟ್ವಿಟರ್‌) ಮೂಲಕ ಅಭಿನಂದಿಸಿದ್ದಾರೆ.

ಉಭಯ ನಾಯಕರ ಸಹಭಾಗಿತ್ವದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತರರಾಷ್ಟ್ರೀಯ ಸಂಬಂಧ ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮರು ಚುನಾವಣೆಯಲ್ಲಿ ಐತಿಹಾಸಿಕ ವಿಜಯ ಸಾಧಿಸಿದ ಬಳಿಕ, ಆಂಥೋನಿ ಅಲ್ಬನೀಸ್‌ ಅವರಿಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದು, ಈ ಅವಧಿಯಲ್ಲಿ ಎರಡು ದೇಶಗಳ ನಡುವಿನ ಬಹುಪಕ್ಷೀಯ ಸಂಬಂಧ ಮತ್ತಷ್ಟು ಸುಧಾರಣೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಆಂಥೋನಿ ಅಲ್ಬನೀಸ್‌ ಅವರು ಚುನಾವಣೆ ಗೆಲ್ಲುವ ಮೂಲಕ, ಕಳೆದ 21 ವರ್ಷಗಳಲ್ಲಿ ಮೊದಲ ಬಾರಿಗೆ, ಆಸ್ಟ್ರೇಲಿಯಾ ಪ್ರಧಾನಿಯೊಬ್ಬರು ಎರಡು ಅವಧಿಗೆ ಆಯ್ಕೆಯಾದ ಸಾಧನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.