ADVERTISEMENT

Operation sindoor | ಕರ್ತಾರ್‌ಪುರ ಕಾರಿಡಾರ್ ಬಂದ್‌; ವಾಪಾಸಾದ ಯಾತ್ರಿಕರು

ಪಿಟಿಐ
Published 7 ಮೇ 2025, 12:37 IST
Last Updated 7 ಮೇ 2025, 12:37 IST
<div class="paragraphs"><p>ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ </p></div>

ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌

   

ಸಂಗ್ರಹ ಚಿತ್ರ

ಚಂಡಿಗಢ: ಭಾರತದ ಗುರುದಾಸ್‌ಪುರದ ಡೇರಾ ಬಾಬಾ ನಾನಕ್‌ ಸಾಹಿಬ್ ಮತ್ತು ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ದರ್ಬಾರ್ ಸಾಹಿಬ್‌ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುವ ‘ಕರ್ತಾರ್‌ಪುರ ಕಾರಿಡಾರ್’ ಅನ್ನು ದಿನದ ಮಟ್ಟಿಗೆ ಮುಚ್ಚಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ADVERTISEMENT

ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಯೋತ್ಪಾದಕರ ವಿರುದ್ಧ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ.

‘ಕರ್ತಾರ್‌ಪುರ ಕಾರಿಡಾರ್‌ ಅನ್ನು ಬಂದ್ ಮಾಡಲಾಗಿದ್ದು, ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಯಾತ್ರಾರ್ಥಿಗಳು ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಏತನ್ಮಧ್ಯೆ, ಪ್ರಾರ್ಥನೆ ಸಲ್ಲಿಸಲು ಗುರುದ್ವಾರಕ್ಕೆ ಹೊರಟಿದ್ದ ಅನೇಕ ಯಾತ್ರಿಕರನ್ನು ಕರ್ತಾರ್‌ಪುರ ಕಾರಿಡಾರ್‌ ತಲುಪಿದ ತಕ್ಷಣ ವಾಪಾಸ್ಸಾಗಲು ತಿಳಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದದ ಪ್ರಕಾರ, ದಿನಕ್ಕೆ 5 ಸಾವಿರ ಯಾತ್ರಿಕರು ಐತಿಹಾಸಿಕ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಲು ಪಾಕಿಸ್ತಾನಕ್ಕೆ ಹೋಗಲು ಅವಕಾಶ ಮಾಡಿಕೊಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.