ADVERTISEMENT

ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ: ಇಕ್ಬಾಲ್ ಅನ್ಸಾರಿಗೆ ಆಮಂತ್ರಣ

ಬಾಬ್ರಿ ಮಸೀದಿ ಪರ ಹೋರಾಟಗಾರ ಇಕ್ಬಾಲ್ ಅನ್ಸಾರಿ

ಪಿಟಿಐ
Published 5 ಜನವರಿ 2024, 11:28 IST
Last Updated 5 ಜನವರಿ 2024, 11:28 IST
<div class="paragraphs"><p>ಇಕ್ಬಾಲ್ ಅನ್ಸಾರಿ</p></div>

ಇಕ್ಬಾಲ್ ಅನ್ಸಾರಿ

   

(ಚಿತ್ರ ಕೃಪೆ–ಪಿಟಿಐ)

ಅಯೋಧ್ಯೆ: ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ದಾವೆದಾರ ಇಕ್ಬಾಲ್ ಅನ್ಸಾರಿ ಅವರಿಗೆ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಶುಕ್ರವಾರ ಆಹ್ವಾನ ಬಂದಿದೆ ಎಂದು ಅವರ ಪುತ್ರಿ ಹೇಳಿದ್ದಾರೆ.

ADVERTISEMENT

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಆಹ್ವಾನ ನೀಡಲಾಗಿದೆ. ರಾಮಪಥದ ಬಳಿಯ ಕೋಟಿಯಾ ಪಂಜಿತೋಲಾದಲ್ಲಿರುವ ಅವರ ಮನೆಗೆ ಆಮಂತ್ರಣ ಪತ್ರಿಕೆ ಬಂದಿದೆ ಎಂದು ಅನ್ಸಾರಿ ಅವರ ಪುತ್ರಿ ಶಮಾ ಪರ್ವೀನ್ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಜನವರಿ 22 ರಂದು ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಆಹ್ವಾನಿತರ ಪಟ್ಟಿಯಲ್ಲಿ ಭಾರತ ಮತ್ತು ವಿದೇಶದಿಂದ ಸುಮಾರು 7 ಸಾವಿರ ಅತಿಥಿಗಳು ಸೇರಿದ್ದಾರೆ.

ರಾಮಮಂದಿರ ವಿಚಾರದಲ್ಲಿ 2019ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಮುಸ್ಲಿಂ ಸಮುದಾಯ ಗೌರವಿಸುತ್ತದೆ ಎಂದು ಅನ್ಸಾರಿ ಅವರು 2023ರ ಡಿಸೆಂಬರ್ 31ರಂದು ತಮ್ಮ ನಿವಾಸದಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.