ADVERTISEMENT

ಬಿಹಾರ ಸಚಿವ ಚಂದ್ರಶೇಖರ್‌ ನಾಲಗೆ ತಂದವರಿಗೆ ₹10 ಕೋಟಿ: ಅಯೋಧ್ಯೆ ಸ್ವಾಮೀಜಿ

ಐಎಎನ್ಎಸ್
Published 12 ಜನವರಿ 2023, 9:33 IST
Last Updated 12 ಜನವರಿ 2023, 9:33 IST
   

ಅಯೋಧ್ಯೆ: ಹಿಂದೂ ಗ್ರಂಥಗಳ ವಿರುದ್ಧ ಹೇಳಿಕೆ ನೀಡಿರುವ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಅವರು ಅಯೋಧ್ಯೆ ಸ್ವಾಮೀಜಿಗಳು, ಅರ್ಚಕರ ಕೋಪಕ್ಕೆ ಗುರಿಯಾಗಿದ್ದಾರೆ.

ರಾಮಚರಿತಮಾನಸ ಮತ್ತು ಮನುಸ್ಮೃತಿ ಸಮಾಜವನ್ನು ವಿಭಜಿಸುವ ಮತ್ತು ದ್ವೇಷವನ್ನು ಹರಡುವ ಗ್ರಂಥಗಳಾಗಿವೆ ಎಂದು ಚಂದ್ರಶೇಖರ್‌ ಬುಧವಾರ ಹೇಳಿದ್ದರು.

ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ತಪಸ್ವಿ ಚಾವ್ನಿಯ ಮಹಂತ ಪರಮಹಂಸ ದಾಸ್ ಅವರು, ಚಂದ್ರಶೇಖರ್ ಅವರ ನಾಲಗೆಯನ್ನು ಯಾರೇ ಕತ್ತರಿಸಿ ತಂದರೂ ಅವರಿಗೆ ₹10 ಕೋಟಿ ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ. ಅಲ್ಲದೆ, ಇಂಥ ಸಚಿವರನ್ನು ಸಂಪುಟದಿಂದ ಕೂಡಲೇ ವಜಾಗೊಳಿಸಬೇಕು ಎಂದು ಅಗ್ರಹಿಸಿದ್ದಾರೆ.

ADVERTISEMENT

ಈ ಹೇಳಿಕೆಗೆ ರಾಮಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ನಾವು ಸುಮ್ಮನಿರುವುದಿಲ್ಲ ಎಂದೂ ಹೇಳಿದರು.

ಸಚಿವ ಚಂದ್ರಶೇಖರ್‌ ಅವರನ್ನು ಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಜಗದ್ಗುರು ಪರಮಹಂಸ ಆಚಾರ್ಯ ಕೂಡ ಒತ್ತಾಯಿಸಿದ್ದು, ಸಚಿವರ ಹೇಳಿಕೆಯಿಂದ ಇಡೀ ದೇಶಕ್ಕೆ ನೋವಾಗಿದೆ ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಎಂದು ಚಂದ್ರಶೇಖರ್‌ ಅವರನ್ನು ಅವರು ಒತ್ತಾಯಿಸಿದ್ದಾರೆ. ರಾಮಚರಿತಮಾನಸವು ಜನರಿಗೆ ಆಪ್ತವಾದ ಮತ್ತು ಮಾನವೀಯತೆಯನ್ನು ಸಾರುವ ಗ್ರಂಥವಾಗಿದೆ ಎಂದು ಅವರು ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.