ADVERTISEMENT

‘ಯೋಗ ಬ್ರೇಕ್’ ಕಾರ್ಯಕ್ರಮ ಪುನರಾರಂಭ

ಪಿಟಿಐ
Published 25 ಸೆಪ್ಟೆಂಬರ್ 2020, 10:31 IST
Last Updated 25 ಸೆಪ್ಟೆಂಬರ್ 2020, 10:31 IST
   

ನವದೆಹಲಿ: ಕೋವಿಡ್-19 ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದ್ದ ಯೋಗವನ್ನು ಪ್ರಚುರಪಡಿಸುವ ‘ಯೋಗ ಬ್ರೇಕ್’ ಕಾರ್ಯಕ್ರಮವನ್ನು ಆಯುಷ್ ಸಚಿವಾಲಯ ಶುಕ್ರವಾರ ಪುನರಾರಂಭಿಸಿತು.

ಐದು ನಿಮಿಷ ಅವಧಿಯ ಈ ಶಿಷ್ಟಾಚಾರ ಕಾರ್ಯಕ್ರಮವು ಜನರು ತಮ್ಮ ಕೆಲಸದ ಸ್ಥಳದಲ್ಲಿಯೇ ಬಿಡುವು ಮಾಡಿಕೊಂಡು ಯೋಗ ಮಾಡುವುದನ್ನು ಉತ್ತೇಜಿಸಲಿದೆ. ಇದರಿಂದ ಮನಸ್ಸು ಚೇತೋಹಾರಿಯಾಗಲಿದೆ ಎಂದು ಹೇಳಿಕೆ ತಿಳಿಸಿದೆ.

ಯೋಗ ಭಾರತದ ಪ್ರಾಚೀನ ಹವ್ಯಾಸ. ವ್ಯಕ್ತಿಗೆ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕವಾಗಿ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಮುಖ್ಯವಾಗಿ, ಕಂಪ್ಯೂಟರ್ ಎದುರು ಮತ್ತು ನಿರಂತರವಾಗಿ ದೀರ್ಘ ಕಾಲ ಕುಳಿತು ಕೆಲಸ ಮಾಡುವ ಬಹುಸಂಖ್ಯಾತ ಶ್ರಮಿಕರು ಒತ್ತಡದಿಂದ ಬಳಲುತ್ತಾರೆ. ಇದನ್ನು ಕುಗ್ಗಿಸಲು ಮತ್ತು ಉತ್ಸಾಹಿಗಳಾಗಿ ಮತ್ತೆ ಕೆಲಸದಲ್ಲಿ ತೊಡಗಲು ಯೋಗ ನೆರವಾಗಲಿದೆ ಎಂದು ಸಚಿವಾಲಯವು ತಿಳಿಸಿದೆ.

ADVERTISEMENT

ಆಯುಷ್ ಸಚಿವಾಲಯವು ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆಯ ಸಹಯೋಗದಲ್ಲಿ ಐದು ನಿಮಿಷ ಅವಧಿಯ ‘ಯೋಗ ಬ್ರೇಕ್’‌ ಕಾರ್ಯಕ್ರಮ ರೂಪಿಸಿದೆ. ಕೆಲಸದ ಸ್ಥಳಗಳಲ್ಲಿ ಅನುಸರಿಸಲು ಇದನ್ನು 2019ರಲ್ಲಿ ಜಾರಿಗೊಳಿಸಿತ್ತು. ಕಟಿ ಚಕ್ರಾಸನ, ಪ್ರಾಣಾಯಾಮ, ಧ್ಯಾನ ಸೇರಿದಂತೆ ವಿವಿಧ ಆಸನಗಳನ್ನು ಒಳಗೊಂಡ ಈ ಕಾರ್ಯಕ್ರಮವನ್ನು ಯೋಗ ಪರಿಣಿತರು ರೂಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.