ADVERTISEMENT

ಶಿಮ್ಲಾ: ಪ್ರತಿಕೂಲ ಹವಾಮಾನ, ಪ್ರವಾಸಿಗರ ರಕ್ಷಣೆಗೆ ಹೊರಟಿದ್ದ ಹೆಲಿಕಾಪ್ಟರ್‌ ವಾಪಸ್‌

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 14:04 IST
Last Updated 11 ಜುಲೈ 2023, 14:04 IST
ಭಾರಿ ಮಳೆ
ಭಾರಿ ಮಳೆ    

ಶಿಮ್ಲಾ: ಅತಂತ್ರರಾಗಿರುವ ಪ್ರವಾಸಿಗರನ್ನು ಕರೆತರಲು ಲಹೌಲ್ ಮತ್ತು ಸ್ಪೀತಿ ಜಿಲ್ಲೆಯ ಚಂದ್ರತಾಲ್‌ಗೆ ತೆರಳಿದ್ದ ಹೆಲಿಕಾಪ್ಟರ್‌ ಪ್ರತಿಕೂಲ ಹವಾಮಾನದಿಂದಾಗಿ ವಾಪಸ್‌ ಬಂದಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಸತ್ವಂತ್ ಅತ್ವಾಲ್ ಮಂಗಳವಾರ ತಿಳಿಸಿದ್ದಾರೆ.

ಮೋಡ ಸರಿದಿರುವುದರಿಂದ ಮತ್ತೊಮ್ಮೆ ಪ್ರಯತ್ನಿಸುತ್ತಿದ್ದೇವೆ ಎಂದು ಟ್ವೀಟ್‌ ಮಾಡಿದ್ದಾರೆ.

‘ಭುಂತರ್‌ನಿಂದ ಮಧ್ಯಾಹ್ನ 12ಗಂಟೆಗೆ ಹೆಲಿಕಾಪ್ಟರ್‌ ಹೊರಟಿತ್ತು. ಆದರೆ ಪ್ರತಿಕೂಲ ಹವಾಮಾನ ಮತ್ತು ದಟ್ಟ ಮೋಡ ಕವಿದಿದ್ದರಿಂದ ವಾಪಸ್‌ ಕರೆಸಲಾಯಿತು. ಅತಂತ್ರರಾಗಿರುವ ಪ್ರವಾಸಿಗರು ಧೈರ್ಯದಿಂದ ಇರಬೇಕು. ರಕ್ಷಣೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ADVERTISEMENT

ಭಾರಿ ಮಳೆಸುರಿಯುತ್ತಿರುವ ಕಾರಣ ಸುಮಾರು 300 ಪ್ರವಾಸಿಗರು ಸಮುದ್ರಮಟ್ಟದಿಂದ 14,100 ಅಡಿ ಎತ್ತರದಲ್ಲಿರುವ ಚಂದ್ರತಾಲ್‌ ಶಿಬಿರದಲ್ಲಿ ಸಿಲುಕಿದ್ದಾರೆ. ಅಧಿಕಾರಿಗಳ ಪ್ರಕಾರ, ಚಂದ್ರತಾಲ್ ಮತ್ತಿತರ ಪ್ರದೇಶಗಳಲ್ಲಿ ಸುಮಾರು 800 ಮಂದಿ ಅತಂತ್ರರಾಗಿದ್ದಾರೆ.

ಓದಿ... ಭಾರಿ ಮಳೆಗೆ ಹಿಮಾಚಲ ಪ್ರದೇಶ ತತ್ತರ: ಸಚಿವರೊಂದಿಗೆ ಮೋದಿ ಮಾತುಕತೆ, ಪರಿಸ್ಥಿತಿ ಅವಲೋಕನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.