ADVERTISEMENT

ಭಕ್ತರಿಗೆ ತೆರೆದ ಬದರೀನಾಥ ಧಾಮ: 15 ಕ್ವಿಂಟಲ್‌ ಹೂಗಳಿಂದ ದೇಗುಲಕ್ಕೆ ಸಿಂಗಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2023, 4:13 IST
Last Updated 27 ಏಪ್ರಿಲ್ 2023, 4:13 IST
ಬದರೀನಾಥ ದೇಗುಲ
ಬದರೀನಾಥ ದೇಗುಲ   ಪಿಟಿಐ ಚಿತ್ರ

ಡೆಹ್ರಾಡೂನ್‌: ಪ್ರಖ್ಯಾತ ತೀರ್ಥ ಕ್ಷೇತ್ರ ಬದರೀನಾಥ ದೇಗುಲ ಇಂದು ಬೆಳಿಗ್ಗೆ 7.10 ಕ್ಕೆ ಭಕ್ತರಿಗೆ ತೆರೆಯಲಾಯಿತು. ಮಂತ್ರಘೋಷಗಳ ಉದ್ಗಾರದೊಂದಿಗೆ ಬಾಗಿಲು ತೆರೆಯಲಾಯ್ತು.

ಇಡೀ ದೇಗುಲವನ್ನು 15 ಕ್ವಿಂಟಲ್‌ ಹೂಗಳಿಂದ ಸಿಂಗರಿಸಲಾಗಿತ್ತು. ದೇಗುವದ ಬಾಗಿಲು ತೆರೆಯುವ ವೇಳೆ ಭಕ್ತರ ಉದ್ಘೋಷ ಮುಗಿಲು ಮುಟ್ಟಿತ್ತು. ಕೀರ್ತನೆಗಳನ್ನು ಹಾಡಿ, ನೃತ್ಯ ಮಾಡಿ ಸಂಭ್ರಮಿಸಿದರು. ಬಳಿಕ ದೇಗುಲದಲ್ಲಿ ವಿವಿಧ ಪೂಜೆಗಳು ಜರುಗಿದವು.

ಉತ್ತರಾಖಂಡದ ನಾಲ್ಕು ಧಾಮಗಳಲ್ಲಿ ಒಂದಾಗಿರುವ ಬದರೀನಾಥ ಧಾಮವು, ವಿಷ್ಣುವಿನ ದೇಗುಲವಾಗಿದೆ.

ADVERTISEMENT

ಮಂಗಳವಾರ ಕೇದರನಾಥ ದೇಗುಲವು ವರ್ಷದ ಪೂಜೆಗೆ ತೆರೆಯಲಾಗಿತ್ತು. ಮೊದಲ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ನಿರ್ವಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.