ಟ್ರಾನ್ಸ್‌ಜೆಂಡರ್ ವೇಷದಲ್ಲಿರುವ ಬಾಂಗ್ಲಾ ಪ್ರಜೆ
ಚಿತ್ರಕೃಪೆ: ಎಕ್ಸ್
ಭೋಪಾಲ್(ಮಧ್ಯ ಪ್ರದೇಶ): ಅಕ್ರಮ ವಲಸೆ ವಿರುದ್ಧದ ಕಾರ್ಯಾಚರಣೆ ವೇಳೆ ಭೋಪಾಲ್ ಪೊಲೀಸರು ಕಳೆದ ಎಂಟು ವರ್ಷಗಳಿಂದ ‘ನೇಹಾ’ ಎಂಬ ನಕಲಿ ಗುರುತಿನಡಿ ನಗರದಲ್ಲಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆ ಅಬ್ದುಲ್ ಕಲಾಂ ಎಂಬವರನ್ನು ಬಂಧಿಸಿದ್ದಾರೆ.
10ನೇ ವಯಸ್ಸಿಗೆ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಅಬ್ದುಲ್, 20 ವರ್ಷಗಳನ್ನು ಮುಂಬೈನಲ್ಲಿ ಕಳೆದಿದ್ದಾರೆ. ಕಳೆದ 8 ವರ್ಷದಿಂದ ಭೋಪಾಲ್‌ನ ಬುಧ್ವಾರಾದಲ್ಲಿ ನೆಲೆಸಿರುವ ಅವರು ಮಂಗಳಮುಖಿ ಎಂದು ಹೇಳಿಕೊಂಡು ಸ್ಥಳೀಯ ಹಿಜಡಾ ಸಮುದಾಯದ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಸ್ಥಳೀಯ ಏಜೆಂಟರ ಸಹಾಯದಿಂದ ನಕಲಿ ದಾಖಲೆಗಳನ್ನು ಬಳಸಿಕೊಂಡು ಆಧಾರ್ ಕಾರ್ಡ್, ಪಡಿತರ ಚೀಟಿ, ಪಾಸ್‌ಪೋರ್ಟ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
‘ನಕಲಿ ಗುರುತಿನ ಚೀಟಿಯನ್ನು ಬಳಸಿಕೊಂಡು ಭಾರತದಲ್ಲಿ ನೆಲೆಸಿದ್ದಲ್ಲದೇ, ನಕಲಿ ಪಾಸ್‌ಪೋರ್ಟ್ ಅನ್ನು ಬಳಸಿಕೊಂಡು ವಿದೇಶಕ್ಕೂ ಪ್ರಯಾಣ ಮಾಡಿದ್ದಾರೆ. ಬುಧ್ವಾರಾದಲ್ಲಿ ಹಲವು ಮನೆಗಳನ್ನು ಬದಲಾಯಿಸಿರುವ ಈತ, ನೇಹಾ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದನು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಗುರುತನ್ನು ಮರೆಮಾಚಲು ಮಂಗಳಮುಖಿಯಾಗಿ ವೇಷ ಮರೆಸಿಕೊಂಡಿದ್ದಾನಾ? ಅಥವಾ ಜೈವಿಕವಾಗಿ ಲಿಂಗತ್ವ ಅಲ್ಪಸಂಖ್ಯಾತನಾ? ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಮಹಾರಾಷ್ಟ್ರದಲ್ಲೂ ಮಂಗಳಮುಖಿಯಾಗಿ ಅಬ್ದುಲ್ ಸಕ್ರಿಯವಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಯಾವುದಾದರೂ ಭೂಗತ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.