ADVERTISEMENT

ಐದು ವರ್ಷಗಳಲ್ಲಿ ₹9.91 ಲಕ್ಷ ಕೋಟಿ ಸಾಲ ರೈಟ್‌ಆಫ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 21:00 IST
Last Updated 2 ಆಗಸ್ಟ್ 2022, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಳೆದ ಐದು ಹಣಕಾಸು ವರ್ಷಗಳಲ್ಲಿ ಬ್ಯಾಂಕ್‌ಗಳು ಒಟ್ಟು ₹ 9.91 ಲಕ್ಷ ಕೋಟಿ ಮೊತ್ತದ ಸಾಲವನ್ನು ರೈಟ್‌ಆಫ್ ಮಾಡಿವೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಮಂಗಳವಾರ ಹೇಳಿದೆ.

2021–22ನೆಯ ಆರ್ಥಿಕ ವರ್ಷದಲ್ಲಿ ರೈಟ್‌ಆಫ್‌ (ವಸೂಲಿ ಪ್ರಕ್ರಿಯೆಯನ್ನು ಬಹುತೇಕ ಸ್ಥಗಿತಗೊಳಿಸಿರುವ)
ಮೊತ್ತವು ₹ 1.57 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಇದು ಹಿಂದಿನ (2020–21) ಆರ್ಥಿಕ ವರ್ಷದಲ್ಲಿ ₹ 2.02 ಲಕ್ಷ ಕೋಟಿ ಆಗಿತ್ತು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ.ಕರಾಡ್ ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಶೆಡ್ಯೂಲ್ಡ್‌ ವಾಣಿಜ್ಯ ಬ್ಯಾಂಕ್‌ಗಳು ಹಾಗೂ ದೇಶದ ಇತರ ಎಲ್ಲ ಹಣಕಾಸು ಸಂಸ್ಥೆಗಳು ಒಟ್ಟು ₹ 5 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಸಾಲವಾಗಿ ಪಡೆದಿರುವ ಎಲ್ಲ ಸಾಲಗಾರರ ವಿವರವನ್ನು ಆರ್‌ಬಿಐಗೆ ನೀಡುತ್ತವೆ ಎಂದು ಸಚಿವರು ತಿಳಿಸಿದ್ದಾರೆ.‌

ADVERTISEMENT

2018–19ರ ನಂತರದ ಮಾಹಿತಿ ಪ್ರಕಾರ ಉದ್ದೇಶಪೂರ್ವಕ ಸುಸ್ತಿದಾರರ ಸಂಖ್ಯೆಯು ದೇಶದಲ್ಲಿ 10,306 ಎಂದು ಅವರು ಹೇಳಿದ್ದಾರೆ.

ತಲೆಮರೆಸಿಕೊಂಡಿರುವ ಉದ್ಯಮಿ ಮೆಹುಲ್ ಚೋಕ್ಸಿ ಅವರ ಗೀತಾಂಜಲಿ ಜೆಮ್ಸ್ ಕಂಪನಿಯು ಬ್ಯಾಂಕ್‌ಗಳಿಗೆ ಒಟ್ಟು ₹ 7,110 ಕೋಟಿ ಪಾವತಿಸಬೇಕಿದೆ. ಎರಾ ಇನ್‌ಫ್ರಾ ಎಂಜಿನಿಯರಿಂಗ್ ಕಂಪನಿಯು ₹ 5,879 ಕೋಟಿ ಕೊಡಬೇಕಿದೆ.‌

ಉದ್ದೇಶಪೂರ್ವಕ ಸುಸ್ತಿದಾರರು

ಕಾನ್‌ಕಾಸ್ಟ್‌ ಸ್ಟೀಲ್ ಆ್ಯಂಡ್ ಪವರ್ (₹ 4,107 ಕೋಟಿ ಬಾಕಿ),ಆರ್‌ಇಐ ಆಗ್ರೊ (₹ 3,984 ಕೋಟಿ ಬಾಕಿ), ಎಬಿಜಿ ಶಿಪ್‌ಯಾರ್ಡ್‌ (₹ 3,708 ಕೋಟಿ), ಫ್ರಾಸ್ಟ್‌ ಇಂಟರ್‌ನ್ಯಾಷನಲ್ ಲಿ (₹ 3,108ಕೋಟಿ), ವಿನ್‌ಸಮ್‌ ಡೈಮಂಡ್ಸ್‌ ಆ್ಯಂಡ್‌ ಜುವೆಲ್ಲರಿ (₹ 2,671 ಕೋಟಿ), ರೊಟೊಮ್ಯಾಕ್ ಗ್ಲೋಬಲ್ ಪ್ರೈ.ಲಿ. (₹ 2,481 ಕೋಟಿ), ಕೋಸ್ಟಲ್ ಪ್ರಾಜೆಕ್ಟ್ಸ್‌ ಲಿ. (₹ 2,311 ಕೋಟಿ), ಕುಡೋಸ್ ಕೆಮಿ (₹ 2,082 ಕೋಟಿ)

ವರ್ಷ;ರೈಟ್‌ಆಫ್‌ ಮೊತ್ತ

2019–20;₹ 2.34 ಲಕ್ಷ ಕೋಟಿ

2018–19;₹ 2.36 ಲಕ್ಷ ಕೋಟಿ

2017–18;₹ 1.61 ಲಕ್ಷ ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.