ADVERTISEMENT

‘ಮೋದಿ ಆಡಳಿತಕ್ಕಿಂತ ಮೊದಲು ಶ್ರೀಮಂತರಿಗೆ ಪದ್ಮ ಪ್ರಶಸ್ತಿ ಕೊಡಲಾಗುತ್ತಿತ್ತು’

ಗೋವಾ ಬಿಜೆಪಿ ಮುಖಂಡ ಸದಾನಂದ ಶೇಟ್‌ ತನವಾಡೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 14:23 IST
Last Updated 15 ನವೆಂಬರ್ 2021, 14:23 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಪಣಜಿ: ‘ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕಿಂತ ಹಿಂದೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಶ್ರೀಮಂತರಿಗೆ, ಇಂಗ್ಲಿಷ್‌ ಮಾತನಾಡುವವರಿಗೆ ಮತ್ತು ಉನ್ನತ ಸ್ಥಾನದಲ್ಲಿರುವವರಿಗೆ ನೀಡಲಾಗುತ್ತಿತ್ತು’ ಎಂದು ಬಿಜೆಪಿ ಗೋವಾ ಘಟಕ ಅಧ್ಯಕ್ಷ ಸದಾನಂದ ಶೇಟ್‌ ತನವಾಡೆ ಸೋಮವಾರ ಹೇಳಿದ್ದಾರೆ.

‘ಮೋದಿ ಅವರ ಆಡಳಿತಾವಧಿಯಲ್ಲಿ ಸಮಾಜದ ಒಳಿತಿಗಾಗಿ ದುಡಿದ ಬಡಜನರನ್ನು ಈ ಗೌರವಕ್ಕೆ ಗುರುತಿಸಲಾಗಿದೆ. ಪ್ರಶಸ್ತಿ ಪುರಸ್ಕೃತರಲ್ಲಿ ಕೆಲವರು ಕಡು ಬಡವರು. ಪ್ರಶಸ್ತಿ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ಬರಿಗಾಲಲ್ಲಿ ಬಂದಿದ್ದಾರೆ’ ಎಂದೂ ತಿಳಿಸಿದ್ದಾರೆ.

‘ಇಂತಹ ಜನರು ಮೋದಿ ಅವರನ್ನು ಹೃದಯದಿಂದ ಇಷ್ಟಪಡುತ್ತಾರೆ. ಯಾರು ದ್ವೇಷಿಸುತ್ತಾರೋ ಅವರು ಇಂಗ್ಲಿಷ್‌ ಮಾತನಾಡುವ ಉನ್ನತ ಸ್ಥಾನದಲ್ಲಿರುವವರು. ಅಂಥವರಿಗೆ ಪ್ರಶಸ್ತಿ ನೀಡಿದರೆ ಅವರು ಅದನ್ನು ಮೂಲೆಗುಂಪು ಮಾಡುತ್ತಾರೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.