ADVERTISEMENT

ವಾಯು ರಕ್ಷಣಾ ಅಗ್ನಿ ನಿಯಂತ್ರಣ ರೇಡಾರ್‌ ಖರೀದಿ: BEL ಜತೆ ₹2 ಸಾವಿರ ಕೋಟಿ ಒಪ್ಪಂದ

ಪಿಟಿಐ
Published 25 ಜುಲೈ 2025, 14:33 IST
Last Updated 25 ಜುಲೈ 2025, 14:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಸೇನೆಗೆ ವಾಯುರಕ್ಷಣಾ ಅಗ್ನಿ ನಿಯಂತ್ರಣ ರೇಡಾರ್‌ ಖರೀದಿ ಮಾಡುವ ಸಂಬಂಧ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌) ಸಂಸ್ಥೆಯ ಜೊತೆಗೆ ರಕ್ಷಣಾ ಇಲಾಖೆಯು ₹2 ಸಾವಿರ ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿದೆ.

‘ಅಗ್ನಿ ನಿಯಂತ್ರಣ ರೇಡಾರ್‌ನಿಂದ ಆಕಾಶ ಮಾರ್ಗದಲ್ಲಿ ಯುದ್ಧ ವಿಮಾನ, ಹೆಲಿಕಾಪ್ಟರ್ ಹಾಗೂ ಡ್ರೋನ್‌ಗಳಿಂದ ಎದುರಾಗುವ ಬೆದರಿಕೆಗಳನ್ನು ತಡೆಯಬಹುದಾಗಿದೆ’ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

‘ದೇಶಿಯವಾಗಿ ವಿನ್ಯಾಸಗೊಳಿಸಿ, ತಯಾರಿಸಿದ ರೇಡಾರ್‌ ಅನ್ನೇ ರಕ್ಷಣಾ ಇಲಾಖೆ ಖರೀದಿಸಲಿದೆ. ಇದರ ಅನ್ವಯ, ಹೊಸ ರೇಡಾರ್‌  ಶೇಕಡ 70ರಷ್ಟು ದೇಶಿಯ ಉತ್ಪನ್ನಗಳನ್ನು ಒಳಗೊಂಡಿರಲಿದೆ. ವಾಯು ರಕ್ಷಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಇದು ಮಹತ್ತರ ಮೈಲಿಗಲ್ಲಾಗಲಿದ್ದು, ದೇಶದ ಅಭಿವೃದ್ಧಿಗೂ ಕೊಡುಗೆ ನೀಡಲಿದೆ’ ಎಂದು ರಕ್ಷಣಾ ಇಲಾಖೆ ಹೇಳಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.