ADVERTISEMENT

ಗಣರಾಜ್ಯೋತ್ಸವ ಸ್ತಬ್ಧಚಿತ್ರ: ಒಡಿಶಾಗೆ ನಿರ್ಣಾಯಕರ ಬಹುಮಾನ; ಜನರ ಆಯ್ಕೆ ಗುಜರಾತ್

ಪಿಟಿಐ
Published 31 ಜನವರಿ 2024, 9:01 IST
Last Updated 31 ಜನವರಿ 2024, 9:01 IST
<div class="paragraphs"><p>ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶನಗೊಂಡ ಒಡಿಶಾದ ಸ್ತಬ್ಧಚಿತ್ರ</p></div>

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶನಗೊಂಡ ಒಡಿಶಾದ ಸ್ತಬ್ಧಚಿತ್ರ

   

ಪಿಟಿಐ ಚಿತ್ರ

ನವದೆಹಲಿ: ಇಲ್ಲಿನ ಕರ್ತವ್ಯಪಥದಲ್ಲಿ ಜ. 26ರಂದು ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಂಡ ಮಹಿಳೆಯರ ಸಬಲೀಕರಣ ಕುರಿತ ಒಡಿಶಾದ ಸ್ತಬ್ಧಚಿತ್ರಕ್ಕೆ ನಿರ್ಣಾಯಕರ ಮೊದಲ ಬಹುಮಾನ ದೊರೆತಿದೆ. ಧೋರ್ಡೊ ಪ್ರವಾಸೋದ್ಯಮ ಗ್ರಾಮ ಕುರಿತ ಗುಜರಾತ್‌ನ ಸ್ತಬ್ಧಚಿತ್ರಕ್ಕೆ ಜನರ ಮೆಚ್ಚುಗೆಯ ಬಹುಮಾನ ಲಭಿಸಿದೆ.

ADVERTISEMENT

ಸಂಸ್ಕೃತಿ ಸಚಿವಾಲಯ ಸಿದ್ಧಪಡಿಸಿದ್ದ ‘ಪ್ರಜಾಪ್ರಭುತ್ವ ತಾಯಿ ಭಾರತ’ ಎಂಬ ಸ್ತಬ್ಧಚಿತ್ರ ಎಲ್ಲಾ ಸ್ತಬ್ಧಚಿತ್ರಗಳಲ್ಲೇ ಅತ್ಯುತ್ತಮ ಎಂದೆನಿಸಿಕೊಂಡು ಬಹುಮಾನ ಪಡೆದಿದೆ. ಗೃಹ ಸಚಿವಾಲಯದ ‘ವಿಶೇಷ ಗ್ರಾಮಗಳು’ ಎಂಬ ಸ್ತಬ್ಧಚಿತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.

ಒಟ್ಟು 16 ಸ್ತಬ್ಧಚಿತ್ರಗಳು ಈ ಬಾರಿ ಗಣರಾಜ್ಯೋತ್ಸವದಲ್ಲಿ ಪ್ರದರ್ಶನಗೊಂಡವು. ಅರುಣಾಚಲ ಪ್ರದೇಶ, ಹರಿಯಾಣ, ಮಣಿಪುರ, ಮಧ್ಯಪ್ರದೇಶ, ಒಡಿಶಾ, ಛತ್ತೀಸಗಢ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಲಡಾಖ್, ತಮಿಳುನಾಡು, ಗುಜರಾತ್, ಮೇಘಾಲಯ, ಜಾರ್ಖಂಡ್, ಉತ್ತರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸ್ತಬ್ಧಚಿತ್ರಗಳು ಕರ್ತವ್ಯಪಥದಲ್ಲಿ ಪ್ರದರ್ಶನಗೊಂಡವು.

ದೆಹಲಿಯ ಕಂಟೋನ್ಮೆಂಟ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.