ADVERTISEMENT

ಮಲೇರಿಯಾ ಲಸಿಕೆ ಬೆಲೆ ಶೇ. 50ಕ್ಕೂ ಹೆಚ್ಚು ಕಡಿತ

ಪಿಟಿಐ
Published 25 ಜೂನ್ 2025, 13:15 IST
Last Updated 25 ಜೂನ್ 2025, 13:15 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: 2028ರ ವೇಳೆಗೆ ಮಲೇರಿಯಾ ಲಸಿಕೆ ದರವನ್ನು ಶೇಕಡ 50ಕ್ಕೂ ಹೆಚ್ಚು ಕಡಿತ ಮಾಡಲಾಗುವುದು ಎಂದು ಭಾರತ್‌ ಬಯೋಟೆಕ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಮತ್ತು ಜಿಎಸ್‌ಕೆ ಬುಧವಾರ ತಿಳಿಸಿವೆ.

‘ಆರ್‌ಟಿಎಸ್‌,ಎಸ್‌’ ಜಗತ್ತಿನ ಮೊದಲ ಮಲೇರಿಯಾ ಲಸಿಕೆ. ದರ ಇಳಿಕೆಯ ನಂತರ ಇದು 5 ಡಾಲರ್‌ಗಿಂತ ಕಡಿಮೆ ದರಕ್ಕೆ ಲಭ್ಯವಾಗಲಿದೆ. ಉತ್ಪಾದನೆಯಲ್ಲಿನ ಹೆಚ್ಚಳ, ತಯಾರಿಕಾ ವೆಚ್ಚದಲ್ಲಿ ಕಡಿತ ಮತ್ತು ಕನಿಷ್ಠ ಲಾಭಾಂಶ ಹೊಂದುವ ಮೂಲಕ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿವೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.