ADVERTISEMENT

ಭೂತಾನ್‌ ಪ್ರಧಾನಿ ಶೆರಿಂಗ್‌ ಟೊಬ್ಗೆ ಅಯೋಧ್ಯೆಗೆ ಆಗಮನ

ಪಿಟಿಐ
Published 5 ಸೆಪ್ಟೆಂಬರ್ 2025, 7:05 IST
Last Updated 5 ಸೆಪ್ಟೆಂಬರ್ 2025, 7:05 IST
<div class="paragraphs"><p>ಭೂತಾನ್‌ ಪ್ರಧಾನಿ ಶೆರಿಂಗ್‌ ಟೊಬ್ಗೆ,&nbsp;ಉತ್ತರಪ್ರದೇಶ ಸಚಿವ ಸೂರ್ಯ ಪ್ರತಾಪ್ ಶಾಹಿ</p></div>

ಭೂತಾನ್‌ ಪ್ರಧಾನಿ ಶೆರಿಂಗ್‌ ಟೊಬ್ಗೆ, ಉತ್ತರಪ್ರದೇಶ ಸಚಿವ ಸೂರ್ಯ ಪ್ರತಾಪ್ ಶಾಹಿ

   

ಅಯೋಧ್ಯೆ: ಭೂತಾನ್‌ ಪ್ರಧಾನಿ ಶೆರಿಂಗ್‌ ಟೊಬ್ಗೆ ಭಾರತ ಭೇಟಿಗಾಗಿ ಶುಕ್ರವಾರ ಬೆಳಗ್ಗೆ ಇಲ್ಲಿಗೆ ಆಗಮಿಸಿದರು.

ಭಾರತದ ವಾಯುಸೇನೆಯ ವಿಶೇಷ ವಿಮಾನದಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. 

ADVERTISEMENT

ಉತ್ತರಪ್ರದೇಶ ಸಚಿವ ಸೂರ್ಯ ಪ್ರತಾಪ್ ಶಾಹಿ, ನಗರಪಾಲಿಕೆ ಅಧ್ಯಕ್ಷ ತ್ರಿಪಾಠಿ, ಶಾಸಕ ವೇದ ಪ್ರಕಾಶ್ ಗುಪ್ತಾ ಸೇರಿದಂತೆ ಹಿರಿಯ ಆಡಳಿತಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು.

ಇದೇ ದಿನ ಅವರು ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ ಹಾಗೂ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶನಿವಾರ ಭಾರತ ಸರ್ಕಾರದ ಸಚಿವರೊಂದಿಗೆ ಉಭಯ ದೇಶಗಳ ನಡುವಿನ ವಿವಿಧ ಒಪ್ಪಂದಗಳಿಗೆ ಸಹಿ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.