ADVERTISEMENT

ಬಿಹಾರದ ರಾಜಕೀಯ ಮರುಮೈತ್ರಿಗೆ ಬಿಜೆಪಿಯ ಗೀಳೇ ಕಾರಣ: ಮಾರ್ಗರೆಟ್‌ ಆಳ್ವ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಆಗಸ್ಟ್ 2022, 16:38 IST
Last Updated 9 ಆಗಸ್ಟ್ 2022, 16:38 IST
ಮಾರ್ಗರೆಟ್‌ ಆಳ್ವ
ಮಾರ್ಗರೆಟ್‌ ಆಳ್ವ    

ಬೆಂಗಳೂರು: ಬಿಹಾರದ ರಾಜಕೀಯ ಮರು ಮೈತ್ರಿಗೆಬಿಜೆಪಿಯೇ ಕಾರಣ ಎಂದು ಉಪ ರಾಷ್ಟ್ರಪತಿ ಚುನಾವಣೆಯ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿದ್ದ ಮಾರ್ಗರೆಟ್ ಆಳ್ವ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಹಾರದ ರಾಜಕೀಯ ಸ್ಥಿತ್ಯಂತರದ ಕುರಿತು ಮಂಗಳವಾರ ಅವರು ಟ್ವೀಟರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಪ್ರಾದೇಶಿಕ ಪಕ್ಷಗಳ ನೆಲೆ ಕಸಿದುಕೊಳ್ಳಲು ಮೊದಲು ಅವರನ್ನು ಅಸ್ಥಿರಗೊಳಿಸಿ, ನಂತರ ಅವುಗಳನ್ನು ಕಬಳಿಸುವ ಬಿಜೆಪಿ ರಾಜಕೀಯ ಗೀಳಿನ ಪರಿಣಾಮವೇ ಬಿಹಾರದ ಇಂದಿನ ರಾಜಕೀಯ ಮರುಮೈತ್ರಿ. ಮಹಾರಾಷ್ಟ್ರ, ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ಬಂಗಾಳ, ಜಾರ್ಖಂಡ್‌ನಲ್ಲಿಯೂ ಇದೇ ಕಾರ್ಯತಂತ್ರ ಜಾರಿಯಲ್ಲಿದೆ. ವಿರೋಧ ಪಕ್ಷಗಳ ಒಗ್ಗಟ್ಟಿನಿಂದ ಮಾತ್ರ ಬಿಜೆಪಿಯ ಈ ಕಾರ್ಯತಂತ್ರ ತಡೆಯಲು ಸಾಧ್ಯ’ ಎಂದು ಅವರು ಹೇಳಿದ್ದಾರೆ.

ಇತ್ತೀಚೆಗಷ್ಟೇ ಪೂರ್ಣಗೊಂಡ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಕರ್ನಾಟಕದ ಮಾರ್ಗರೇಟ್‌ ಆಳ್ವ ಅವರು ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌ ಅವರ ಎದುರು ಅವರು ಸೋಲುಂಡರು.

ADVERTISEMENT

ನಿತೀಶ್‌ ಕುಮಾರ್‌ ಅವರು ಮಂಗಳವಾರ ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸರ್ಕಾರ ರಚಿಸಲು ನಿತೀಶ್‌ ಅವರಿಗೆ ಆರ್‌ಜೆಡಿ, ಕಾಂಗ್ರೆಸ್‌ ಬೆಂಬಲ ನೀಡಿವೆ.

ನೂತನ ಸರ್ಕಾರದಲ್ಲಿ ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗಿದ್ದು, ತೇಜಸ್ವಿ ಯಾದವ್‌ ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಗೊತ್ತಾಗಿದೆ. ಬುಧವಾರ ಮಧ್ಯಾಹ್ನ 2 ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನೆರವೇರಲಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.