ಪಟ್ನಾ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೀಟುಗಳ ಹಂಚಿಕೆ ಕುರಿತಂತೆ ‘ಇಂಡಿಯಾ’ ಒಕ್ಕೂಟದ ಸದಸ್ಯರು ಶನಿವಾರ ದೀರ್ಘ ಸಮಾಲೋಚನೆ ನಡೆಸಿದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ನಿವಾಸದಲ್ಲಿ ಆರು ತಾಸು ಸಭೆ ನಡೆಯಿತು.
‘ಸೀಟು ಹಂಚಿಕೆಯ ಮಾತುಕತೆ ಆರಂಭವಾಗಿದೆ. ಆಂತರಿಕ ವಿಚಾರವಾಗಿದ್ದರಿಂದ ಇದೀಗ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ. ಕ್ಷೇತ್ರಗಳ ಹಂಚಿಕೆಯು ಅಂತಿಮಗೊಂಡಾಗ ನಾವೇ ಪ್ರಕಟಿಸುತ್ತೇವೆ’ ಎಂದು ಒಕ್ಕೂಟದ ಸಮನ್ವಯ ಸಮಿತಿಯ ಮುಖ್ಯಸ್ಥರೂ ಆಗಿರುವ ತೇಜಸ್ವಿ ಪತ್ರಕರ್ತರಿಗೆ ತಿಳಿಸಿದರು.
ತೇಜಸ್ವಿ ಯಾದವ್ ‘ಇಂಡಿಯಾ’ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.
ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವು, ನಮ್ಮ ‘ಯುವ ಆಯೋಗ’ ಹಾಗೂ ವೃದ್ಧಾಪ್ಯ ವೇತನ ಹೆಚ್ಚಳದಂತಹ ಜನಪ್ರಿಯ ಯೋಜನೆಗಳನ್ನು ಅನುಕರಿಸಲು ಮುಂದಾಗಿದೆ ಎಂದು ಇದೇ ಸಂದರ್ಭ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.