ADVERTISEMENT

ಬಿಹಾರ ವಿಧಾನಸಭಾ ಚುನಾವಣೆ: ಎರಡನೇ ಹಂತದಲ್ಲಿ ಶೇ 67.14ರಷ್ಟು ಮತದಾನ

ಪಿಟಿಐ
Published 11 ನವೆಂಬರ್ 2025, 12:54 IST
Last Updated 11 ನವೆಂಬರ್ 2025, 12:54 IST
<div class="paragraphs"><p>ಬಿಹಾರದಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ&nbsp;ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದರು</p></div>

ಬಿಹಾರದಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ಮತದಾರರು ಉತ್ಸಾಹದಿಂದ ಬಂದು ಮತ ಚಲಾಯಿಸಿದರು

   

ಪಿಟಿಐ ಚಿತ್ರ

ಪಟ್ನಾ: ತೀವ್ರ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆ ಮಂಗಳವಾರ ಕೊನೆಗೊಂಡಿದೆ. ಎರಡನೇ ಮತ್ತು ಕೊನೆಯ ಹಂತದಲ್ಲಿ 122 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಶೇ 67.14ರಷ್ಟು ಮತದಾನವಾಗಿದೆ. 

ADVERTISEMENT

ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಎರಡನೇ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ಹಲವು ಮತಗಟ್ಟೆಗಳಲ್ಲಿ ಮತದಾರರು ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ್ದಾರೆ.

ರಾಜ್ಯದ ಕತಿಹಾರ್‌ದಲ್ಲಿ ಅತ್ಯಧಿಕ ಅಂದರೆ ಶೇ 75.23ರಷ್ಟು ಹಾಗೂ ನವಡಾದಲ್ಲಿ ಕಡಿಮೆಯೆಂದರೆ ಶೇ 57.31ರಷ್ಟು ಮತಚಲಾವಣೆ ಆಗಿದೆ. 

ಬಿಹಾರದ ಎಲ್ಲ 243 ಕ್ಷೇತ್ರಗಳ ಅಭ್ಯರ್ಥಿಗಳ ಹಣೇಬರಹ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಅಡಕವಾಗಿದ್ದು, ಮುಂದಿನ ಐದು ವರ್ಷಗಳ ಅಧಿಕಾರ ಯಾರ ಪಾಲಾಗಲಿದೆ ಎಂಬುದು ನವೆಂಬರ್‌ 14ರ ಮತಎಣಿಕೆ ದಿನ ಗೊತ್ತಾಗಲಿದೆ. ಹೀಗಾಗಿ ಎಲ್ಲರ ದೃಷ್ಟಿ ನ. 14ರ ಫಲಿತಾಂಶದ ಮೇಲೆ ನೆಟ್ಟಿದೆ.     

ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ರಾಜ್ಯದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಇದಾಗಿದೆ. ನ. 6ರಂದು ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಆಗ ಶೇ 65.1ರಷ್ಟು ಜನರು ಮತ ಚಲಾಯಿಸಿದ್ದರು.  

ರೋಹತಾಸ್‌ ಜಿಲ್ಲೆಯಲ್ಲಿ, ಶಾಲಾ ನಿರ್ಮಾಣದ ಬೇಡಿಕೆ ಈಡೇರದ್ದರಿಂದ ಅಸಮಾಧಾನಗೊಂಡ ಮತದಾರರಲ್ಲಿ ದೊಡ್ಡ ಗುಂಪೊಂದು ಮತದಾನವನ್ನು ಬಹಷ್ಕರಿಸಿತ್ತು. ನವಡಾದಲ್ಲಿ ಎರಡು ರಾಜಕೀಯ ಪಕ್ಷಗಳ ಬೆಂಬಲಿಗರ ನಡುವೆ ತಿಕ್ಕಾಟ ನಡೆಯಿತು. ಪೊಲೀಸರ ಮಧ್ಯ ಪ್ರವೇಶದಿಂದ ಬಿಕ್ಕಟ್ಟು ಶಮನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.