ADVERTISEMENT

ಬಿಹಾರ | 121 ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆ: ಶೇ 64.46ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 20:49 IST
Last Updated 6 ನವೆಂಬರ್ 2025, 20:49 IST
<div class="paragraphs"><p>women voters</p></div>

women voters

   

ಪಟ್ನಾ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಬಿಹಾರದಲ್ಲಿ  ಗುರುವಾರ ಮೊದಲ ಹಂತದ ಚುನಾವಣೆ 121 ಕ್ಷೇತ್ರಗಳಲ್ಲಿ ಶಾಂತಿಯುತವಾಗಿ ನಡೆಯಿತು. ರಾಜ್ಯದ 3.75 ಕೋಟಿ ಮತದಾರರಲ್ಲಿ ಶೇ 64.46ರಷ್ಟು ಮಂದಿ ಮತ ಚಲಾಯಿಸಿದರು.

‘ಮತದಾನದ ದಿನ 143 ದೂರುಗಳು ಬಂದಿದ್ದು, ಅವುಗಳನ್ನು ತಕ್ಷಣವೇ ಇತ್ಯರ್ಥಪಡಿಸಲಾಯಿತು. ಬಕ್ಸರ್‌, ಫತುವಾ ಮತ್ತು ಸೂರ್ಯಗಢ ಮತಗಟ್ಟೆಗಳಲ್ಲಿ ಮತದಾನ ಬಹಿಷ್ಕರಿಸಿದ್ದರು’ ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ವಿನೋದ್ ಸಿಂಗ್‌ ಗುಂಜಿಯಾಲ್ ತಿಳಿಸಿದ್ದಾರೆ.  

ADVERTISEMENT

ಉಪ ಮುಖ್ಯಮಂತ್ರಿ ವಿಜಯ್‌ ಕುಮಾರ್‌ ಸಿನ್ಹಾ ಅವರ ಬೆಂಗಾವಲು ಪಡೆ ಮೇಲೆ ನಡೆದ ದಾಳಿ ಹೊರತುಪಡಿಸಿದರೆ, ಇತರೆ ಅಹಿತಕರ ಘಟನೆಗಳು ವರದಿಯಾಗಿಲ್ಲ. 

Women voters FP)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.