ADVERTISEMENT

ಬಿಹಾರ | ಹುಣ್ಣಿಮೆಗೆ ಸತ್ಯನಾರಾಯಣ; ಅಮಾವಾಸ್ಯೆಗೆ ಭಗವತಿ ಪೂಜೆ ನಡೆಸಲು ನಿರ್ದೇಶನ

ಪಿಟಿಐ
Published 12 ಸೆಪ್ಟೆಂಬರ್ 2025, 7:01 IST
Last Updated 12 ಸೆಪ್ಟೆಂಬರ್ 2025, 7:01 IST
<div class="paragraphs"><p>ಸತ್ಯನಾರಾಯಣ ಪೂಜೆ (ಸಾಂದರ್ಭಿಕ ಚಿತ್ರ)</p></div>

ಸತ್ಯನಾರಾಯಣ ಪೂಜೆ (ಸಾಂದರ್ಭಿಕ ಚಿತ್ರ)

   

ಪಟ್ನಾ: ಸತ್ಯನಾರಾಯಣ ಕಥೆ ಮತ್ತು ಭಗವತಿ ಪೂಜಾ ಮೂಲಕ ಜನರಲ್ಲಿ ಭಕ್ತಿಯ ಜಾಗೃತಿ ಮೂಡಿಸಲು ಮುಂದಾಗಿರುವ ಬಿಹಾರ ಸರ್ಕಾರ, ರಾಜ್ಯದಲ್ಲಿರುವ ದೇವಾಲಯ, ಮಠಗಳಲ್ಲಿ ‘ಆಕಾರ’ ಎಂಬ ಪೂಜಾ ಕೈಂಕರ್ಯ ನಡೆಸುವ ಘಟ್ಟಗಳನ್ನು ನಿರ್ಮಿಸುವಂತೆ ಸುತ್ತೋಲೆ ಹೊರಡಿಸಿದೆ.

ಪ್ರತಿ ತಿಂಗಳು ಈ ಪೂಜೆಗಳನ್ನು ಮನೆಯಲ್ಲೇ ನಡೆಸುವುದರಿಂದ ಅದು ಶುಭವನ್ನು ತರಲಿದೆ ಎಂಬುದನ್ನು ಉತ್ತೇಜಿಸಲು ಸರ್ಕಾರ ತೀರ್ಮಾನಿಸಿದೆ. ‘ಇಂಥ ಪೂಜೆಗಳಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗಲಿದೆ. ಶಾಂತಿ ಹಾಗೂ ಸಂತಸವನ್ನು ತರಲಿದೆ’ ಎಂದು ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್‌ ಮಂಡಳಿಯ ಅಧ್ಯಕ್ಷ ರಣಬೀರ್ ನಂದನ್ ತಿಳಿಸಿದ್ದಾರೆ.

ADVERTISEMENT

'ಪ್ರತಿ ಹುಣ್ಣಿಮೆಯಂದು ಎಲ್ಲಾ ದೇವಾಲಯ ಮತ್ತು ಮಠಗಳಲ್ಲಿ ಸತ್ಯನಾರಾಯಣ ಕಥೆ ಮತ್ತು ಭಗವತಿ ಪೂಜಾ ನಡೆಸುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಇದರ ಮಾಹಿತಿಯನ್ನು ತಮ್ಮ ವ್ಯಾಪ್ತಿಯಲ್ಲಿನ ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿಯನ್ನು ನೋಂದಾಯಿತ ದೇವಾಲಯ ಮತ್ತು ಟ್ರಸ್ಟ್‌ನ ಸದಸ್ಯರಿಗೆ ನೀಡಲಾಗಿದೆ. ಸಾರ್ವಜನಿಕರೂ ತಮ್ಮ ಮನೆಗಳಲ್ಲಿ ಈ ಪೂಜೆಗಳನ್ನು ಪ್ರತಿ ತಿಂಗಳು ಆಚರಿಸುವಂತೆಯೂ ತಿಳಿಸಲಾಗಿದೆ’ ಎಂದು ಹೇಳಿದ್ದಾರೆ.

‘ಸತ್ಯನಾರಾಯಣ ಕಥೆ ಮತ್ತು ಭಗವತಿ ಪೂಜೆಯ ಮಹತ್ವವನ್ನು ಜನರು ಅರಿಯಬೇಕು. ಅಮಾವಾಸ್ಯೆಯನ್ನು ಭಗವತಿ ಪೂಜೆ ನಡೆಸಬೇಕು. ಇದರಿಂದ ಕೆಟ್ಟ ಆತ್ಮಗಳು ಸುಳಿಯದು. ನಕಾರಾತ್ಮಕ ಶಕ್ತಿ ಕಡಿಮೆಯಾಗಲಿದೆ. ದೇವಾಲಯದಲ್ಲಿ ಸ್ಥಾಪಿಸುವ ಆಕಾರಗಳಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಯಲ್ಲಿ ಪೂಜೆಗಳು. ಉಳಿದ ದಿನಗಳಲ್ಲಿ ಯುವ ಸಮುದಾಯಕ್ಕೆ ದೇಶೀಯ ಕ್ರೀಡೆ ಮತ್ತು ಸಮರ ಕಲೆ ಕಲಿಸಬೇಕು ಎಂದು ತಿಳಿಸಲಾಗಿದೆ’ ಎಂದಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡುವ ಅಭಿಯಾನಕ್ಕೆ ಸೆ. 18ರಂದು ಪಟ್ನಾದಲ್ಲಿ ಚಾಲನೆ ದೊರೆಯಲಿದೆ. ಸನಾತನ ಧರ್ಮ ಕುರಿತು ಜಾಗೃತಿ ಮೂಡಿಸುವ, ಯಾಗ, ಆರೋಗ್ಯ ಶಿಬಿರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲೂ ದೇವಾಲಯ ಮತ್ತು ಮಠಗಳು ಬಳಕೆಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದಿದ್ದಾರೆ.

ಬಿಹಾರದಲ್ಲಿ ಟ್ರಸ್ಟ್‌ನಲ್ಲಿ ನೋಂದಾಯಿಸಿರುವ 2,499 ದೇವಾಲಯಗಳು ಹಾಗೂ ಮಠಗಳಿವೆ. 2,512 ನೋಂದಾಯಿಸದ ದೇವಾಲಯಗಳಿಗೆ. ಸರನ್‌ ಜಿಲ್ಲೆಯಲ್ಲಿ ಅತಿ ಹೆಚ್ಚು 206 ದೇವಾಲಯ ಹಾಗೂ ಮಠಗಳಿವೆ. ಮುಜಾಫರ್‌ನಗರದಲ್ಲಿ (187), ಮಧುಬನಿ (156), ಪಟ್ನಾ (144), ಪೂರ್ವ ಚಂಪಾರಣ (137) ಹಾಗೂ ಪಶ್ಚಿಮ ಚಂಪಾರಣ (136) ಸಂಖ್ಯೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.