ಗುಂಡಿಕ್ಕಿ ಕೊಲೆ
ಪಟ್ನಾ: ರಾಜಧಾನಿ ಪಟ್ನಾದಲ್ಲಿ ಭಾನುವಾರ ಅಪರಾಹ್ನ ವಕೀಲನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ವಾರದಲ್ಲಿ ನಡೆದ ಮೂರನೇ ಹತ್ಯೆ ಇದಾಗಿದೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಹತ್ಯೆ ನಡೆಯುತ್ತಿದ್ದು ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ.
ವಕೀಲ ಜೀತೇಂದ್ರ ಮಹ್ತೊ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬ ಪಟ್ನಾದ ಸುಲ್ತಾನ್‌ಗಂಜ್‌ನ ಚಹಾ ಅಂಗಡಿ ಬಳಿ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
‘ಮೆಹ್ತೋ ಅವರನ್ನು ಅಪರಾಹ್ನ 2ಕ್ಕೆ ಗುಂಡಿಕ್ಕಲಾಗಿದೆ. ಮಾಹಿತಿ ಲಭ್ಯವಾದ ಕೂಡಲೆ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ಗಾಯಗೊಂಡಿದ್ದ ಅವರು, ಚಿಕಿತ್ಸೆಯ ವೇಳೆ ಮೃತಪಟ್ಟರು. ಘಟನೆಗೆ ಕಾರಣ ಏನು ಎಂದು ತಿಳಿದುಬಂದಿಲ್ಲ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಘಟನೆ: ಇನ್ನೊಂದು ಘಟನೆಯಲ್ಲಿ ಸಾರಣ್ ಜಿಲ್ಲೆಯ ಬಿಸಾಹಿ ಬಳಿ ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಶಿಕ್ಷಕ ಸಂತೋಷ್ ರೈ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಬೆಳಿಗ್ಗೆ 9.30ಕ್ಕೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಶಿಕ್ಷಕ ರೈ ಮತ್ತು ಅವರ ಸ್ನೇಹಿತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.